ADVERTISEMENT

ರೂ 1050 ಕೋಟಿ ಸಂಗ್ರಹ ಗುರಿ

ಐಐಎಫ್‌ಎಲ್‌ ‘ಎನ್‌ಸಿಡಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಇಂಡಿಯಾ ಇನ್ಫೊಲೈನ್‌ ಫೈನಾನ್ಸ್‌ ಲಿ.(ಐಐಎಫ್‌ಎಲ್‌), ರೂ1000 ಮುಖಬೆಲೆಯ ಸುಭದ್ರವಾದ, ಪರಿವರ್ತಿಸಲಾಗದ ಡಿಬೆಂಚರ್‌ಗಳನ್ನು (ಎನ್‌ಸಿಡಿ) ಸಾರ್ವಜನಿಕರ ಹೂಡಿಕೆ ಗಾಗಿ ಸೆ.17ರಂದು ಬಿಡುಗಡೆ ಮಾಡು ತ್ತಿದ್ದು, ಒಟ್ಟು ರೂ1050 ಕೋಟಿ ಬಂಡ ವಾಳ ಸಂಗ್ರಹಿಸುವ ಗುರಿ ಹೊಂದಿದೆ.

ನಗರದಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ‘ಐಐಎಫ್‌ ಎಲ್‌’ ಬ್ರೋಕಿಂಗ್‌ ವಿಭಾಗದ ಮುಖ್ಯಸ್ಥ ಪ್ರಶಾಂತ್‌ ಪ್ರಭಾಕರ್‌, ಇದು ಕಂಪೆನಿಯ 3ನೇ ‘ಎನ್‌ಸಿಡಿ’ ಆಗಿದೆ. ಈ ಬಾರಿಯ ಎನ್‌ಸಿಡಿಗೆ ರೇಟಿಂಗ್‌ ಸಂಸ್ಥೆ ‘ಕೇರ್‌’ ಎಎ ಶ್ರೇಣಿ ನೀಡಿದೆ. ಕನಿಷ್ಠ ಹೂಡಿಕೆ ರೂ5000 ಇದ್ದು, 3ರಿಂದ 5 ವರ್ಷಗಳವರೆಗೆ ಹಣ ತೊಡಗಿಸಬಹುದು. ಹೂಡಿಕೆದಾರರಿಗೆ ಯಾವುದೇ ವಯೋಮಿತಿ ಇಲ್ಲ. ಮಾಸಿಕ ಶೇ 12.68ರವರೆಗೂ ಪ್ರತಿಫಲವಿದೆ. ಹೂಡಿಕೆಗೆ ಅ. 4 ಕಡೆದಿನ ಎಂದರು.

‘ಬಿಎಸ್‌ಇ’ ಮತ್ತು ‘ಎನ್‌ಎಸ್‌ಇ’ ಅಧಿಕೃತ ಪಟ್ಟಿಗೆ ಎನ್‌ಸಿಡಿ ಸೇರಲಿದ್ದು, ಆಕ್ಸಿಸ್‌ ಕ್ಯಾಪಿಟಲ್‌ ಲಿ. ಮತ್ತು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸರ್ವಿಸಸ್‌ ಸಂಸ್ಥೆಗಳು ಲೀಡ್‌ ಮ್ಯಾನೇಜರ್‌ಗಳಾ ಗಿವೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.