ADVERTISEMENT

ರೂ3,360 ಕೋಟಿ ವಹಿವಾಟು

ಬಿಎಚ್‌ಇಎಲ್: ಬೆಂಗಳೂರಿನ 3 ಘಟಕಗಳ ಹಣಕಾಸು ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಬೆಂಗಳೂರು: ಕೇಂದ್ರೋದ್ಯಮ ಸಂಸ್ಥೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆ ಡ್‌ನ (ಬಿಎಚ್‌ಇಎಲ್) ಬೆಂಗಳೂರಿನ ಮೂರು ಘಟಕಗಳು 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟಾರೆ ರೂ3,360 ಕೋಟಿ ವಹಿವಾಟು ದಾಖಲಿಸಿವೆ.

ಆದರೆ, ವಿದ್ಯುನ್ಮಾನ, ಇಂಡಸ್ಟ್ರಿಯಲ್ ಸಿಸ್ಟಂ ಮತ್ತು ಸೆರಾಮಿಕ್ ವಿಭಾಗಗಳ ಒಟ್ಟಾರೆ ವಹಿವಾಟು 2011-12ನೇ ಸಾಲಿಗೆ ಹೋಲಿಸಿದರೆ ರೂ388 ಕೋಟಿಯಷ್ಟು ಕುಸಿತ ಕಂಡಿದೆ.  ಮೂರೂ ಘಟಕಗಳು ಸೇರಿ ಒಟ್ಟಾರೆ ರೂ522 ಕೋಟಿಯಷ್ಟು ತೆರಿಗೆ ಪೂರ್ವ ಲಾಭ ಗಳಿಸಿವೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ `ಬಿಎಚ್‌ಇಎಲ್'ನ ವಿದ್ಯುನ್ಮಾನ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ. ರಾಮಮೂರ್ತಿ ಈ ಮಾಹಿತಿ ನೀಡಿದರು.

ವಿದ್ಯುನ್ಮಾನ ವಿಭಾಗ ಒಟ್ಟಾರೆ ರೂ1708 ಕೋಟಿ ವಹಿವಾಟು ನಡೆಸಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ  ರೂ602 ಕೋಟಿಯಷ್ಟು ಇಳಿಕೆ ಕಂಡಿದೆ. ತೆರಿಗೆ ಪೂರ್ವ ಲಾಭ ರೂ832 ಕೋಟಿಯಿಂದ ರೂ312 ಕೋಟಿಗೆ ತಗ್ಗಿದೆ. 

ಇಂಡಸ್ಟ್ರಿಯಲ್ ಸಿಸ್ಟಂ  ( ಐಎಸ್‌ಜಿ) ವಿಭಾಗ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ರೂ1161 ಕೋಟಿ ವಹಿವಾಟು ನಡೆಸಿದ್ದು ವಾರ್ಷಿಕ ಶೇ 16ರಷ್ಟು ಪ್ರಗತಿ ದಾಖಲಿಸಿದೆ.

ತೆರಿಗೆ ಪೂರ್ವ ಲಾಭ ಶೇ 8ರಷ್ಟು ಹೆಚ್ಚಿದ್ದು ರೂ263 ಕೋಟಿಗಳಷ್ಟಾಗಿದೆ.  ಸೆರಾಮಿಕ್ ಘಟಕ ರೂ491 ಕೋಟಿ ವಹಿವಾಟು ನಡೆಸಿದ್ದು ಶೇ 13ರಷ್ಟು ಪ್ರಗತಿ ಕಂಡಿದೆ.

ಕಾರ್ಯನಿರ್ವಾಹಕ ನಿರ್ದೇಶಕರಾದ ಅತುಲ್ ಸೋಬ್ತಿ, ಎ.ಎಸ್. ನಾಗರಾಜ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.