ADVERTISEMENT

ರೆಪೊ ದರ ಶೇ 0.25 ಏರಿಕೆ: ಆರ್‌ಬಿಐ

ನಾಲ್ಕೂವರೆ ವರ್ಷಗಳಲ್ಲಿ ಮೊದಲ ಬಾರಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 11:41 IST
Last Updated 6 ಜೂನ್ 2018, 11:41 IST
ರೆಪೊ ದರ ಶೇ 0.25 ಏರಿಕೆ: ಆರ್‌ಬಿಐ
ರೆಪೊ ದರ ಶೇ 0.25 ಏರಿಕೆ: ಆರ್‌ಬಿಐ   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ 0.25ರಷ್ಟು  ಹೆಚ್ಚಿಸುವ ನಿರ್ಧಾರ ಪ್ರಕಟಿಸಿದೆ.

ಕಚ್ಚಾ ತೈಲ ದರ ಏರಿಕೆ ಹಣದುಬ್ಬರದ ಮೇಲೆ ಪರಿಣಾಮ ಬೀರಿರುವುದರಿಂದ  ಬ್ಯಾಂಕ್‌ಗಳಿಗೆ ಅಲ್ಪಾವಧಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವಾಗಿರುವ ರೆಪೊ ದರವನ್ನು ಶೇ 6.25ಕ್ಕೆ ಹೆಚ್ಚಿಸಲಾಗುತ್ತಿದೆ.

ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) 2018–19ನೇ ಸಾಲಿನ ದ್ವಿತೀಯ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದೆ. ನಾಲ್ಕೂವರೆ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಆರ್‌ಬಿಐ ರೆಪೊ ದರ ಹೆಚ್ಚಳ ಪ್ರಕಟಿಸಿದೆ.

ADVERTISEMENT

ಕಳೆದ ಬಾರಿಯ ಹಣಕಾಸು ನೀತಿ ಸಮಿತಿ ಸಭೆಯ ನಂತರದಲ್ಲಿ ಭಾರತದಲ್ಲಿ ಕಚ್ಚಾ ತೈಲ ದರ ಬ್ಯಾರೆಲ್‌ಗೆ 66 ಡಾಲರ್‌ನಿಂದ 74 ಡಾಲರ್‌ಗೆ ಏರಿಕೆ ಕಂಡಿದೆ. ಇದು ಹಣ ದುಬ್ಬರದ ಮೇಲೆ ಪರಿಣಾಮ ಬೀರಿರುವ ಕಾರಣ ರೆಪೊ ದರ ಏರಿಕೆ ಮಾಡಿರುವುದಾಗಿ ಆರ್‌ಬಿಐ ತಿಳಿಸಿದೆ.

ವ್ಯವಸ್ಥೆಯಲ್ಲಿನ ಹೆಚ್ಚುವರಿ ನಗದು ಪ್ರಮಾಣ ತಗ್ಗಿಸಲು ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ (ರಿವರ್ಸ್‌ ರೆಪೊ) ಶೇ 0.25ರಷ್ಟು ಹೆಚ್ಚಿಸಲಾಗಿದ್ದು, ಶೇ 6ರಷ್ಟಾಗಿದೆ.

ಆರ್‌ಬಿಐ ಪ್ರಕಟಣೆಯ ಪ್ರಕಾರ, 2018–19ನೇ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಹಣದುಬ್ಬರ ಶೇ 4.8–4.9ರಷ್ಟು ಹಾಗೂ ದ್ವಿತಿಯಾರ್ಧದಲ್ಲಿ ಶೇ 4.7ರಷ್ಟು ಹಣದುಬ್ಬರ ಅಂದಾಜಿಸಿದೆ. ಏಪ್ರಿಲ್‌ನಲ್ಲಿ ಅಂದಾಜಿಸಿದ ಆರ್ಥಿಕ ವೃದ್ಧಿ ದರ(ಜಿಡಿಪಿ) ಏರಿಕೆ(ಶೇ 7.4ರಷ್ಟು)ಯಲ್ಲಿ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.