ADVERTISEMENT

ರೈಲ್ವೆ ಸುರಕ್ಷತಾ ಆಯುಕ್ತರಾಗಿ ಮಿತ್ತಲ್

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಎಸ್.ಕೆ. ಮಿತ್ತಲ್ ಅವರು ಬೆಂಗಳೂರು ದಕ್ಷಿಣ ರೈಲ್ವೆ ವೃತ್ತದ ಸುರಕ್ಷತಾ ಆಯುಕ್ತರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಮತ್ತು `ನಮ್ಮ ಮೆಟ್ರೊ~ ರೈಲುಗಳ ಸುರಕ್ಷತೆಯ ಜವಾಬ್ದಾರಿಯನ್ನು ಅವರು ನಿರ್ವಹಿಸಲಿದ್ದಾರೆ.

ಭಾರತೀಯ ರೈಲ್ವೆ ಸೇವೆಯ (ಐಆರ್‌ಎಸ್) ಎಂಜಿನಿಯರ್‌ಗಳ 1980ರ ಬ್ಯಾಚ್‌ನವರಾದ ಮಿತ್ತಲ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ, ಮುಖ್ಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.