ADVERTISEMENT

‘ವಾಣಿಜ್ಯ ಸಮರ ಭಾರತದ ಹಿತಾಸಕ್ತಿಗೆ ಧಕ್ಕೆ’

ಪಿಟಿಐ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ನವದೆಹಲಿ: ಜಾಗತಿಕ ವಾಣಿಜ್ಯ ಸಮರವು ಮುಂಬರುವ ದಿನಗಳಲ್ಲಿ ತಾರಕಕ್ಕೆ ಏರಿದರೆ ಭಾರತದ ಆರ್ಥಿಕತೆ ಅದರಲ್ಲೂ ವಿಶೇಷವಾಗಿ ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆತಂಕ ವ್ಯಕ್ತಪಡಿಸಿದೆ.

ಆಮದು – ರಫ್ತು ವಹಿವಾಟಿನ ಮೇಲೆ ಗರಿಷ್ಠ ಪ್ರಮಾಣದಲ್ಲಿ ಸುಂಕ ವಿಧಿಸಲು ಅಮೆರಿಕ ಮತ್ತು ಚೀನಾ ನಿರ್ಧರಿಸಿವೆ. ಇದು ಪೂರ್ಣ ಪ್ರಮಾಣದ ಜಾಗತಿಕ ಸಮರಕ್ಕೆ ದಾರಿ ಮಾಡಿಕೊಟ್ಟರೆ ಅದರಿಂದ ದೇಶಿ ಆರ್ಥಿಕತೆಗೆ ಹಾನಿ ತಟ್ಟಲಿದೆ. ರಫ್ತು ಕಡಿಮೆಯಾಗಲಿದೆ.  ಚಾಲ್ತಿ ಖಾತೆ ಕೊರತೆ ಹೆಚ್ಚಲಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಹಿನ್ನಡೆ ಕಾಣಲಿದೆ ಎಂದು ‘ಅಸೋಚಾಂ’ ಹೇಳಿದೆ.

ಅಮೆರಿಕದ ನಿರ್ಧಾರವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರಲಾರದು. ಆದರೆ, ಪರೋಕ್ಷ ಸ್ವರೂಪದ ಪ್ರತಿಕೂಲ ಪರಿಣಾಮಗಳು ಕಂಡು ಬರಲಿವೆ. ಅಂತಹ ‍ಪರಿಸ್ಥಿತಿ ಎದುರಿಸಲು ಪ್ರಮುಖ ವಾಣಿಜ್ಯ ಪಾಲುದಾರ ದೇಶಗಳ ಜತೆಗೆ ದ್ವಿಪಕ್ಷೀಯ ವ್ಯಾಪಾರ ಸಂಬಂಧ ವೃದ್ಧಿಸಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕೇಳಿಕೊಂಡಿದೆ.

ADVERTISEMENT

ಷೇರುಪೇಟೆಯೂ ಇದರಿಂದ ಪ್ರಭಾವಿತಗೊಂಡರೆ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚಲಿದೆ ಎಂದೂ ಆತಂಕ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.