ADVERTISEMENT

ವಿಟ್ರಾ ಜೊತೆ ಕಜಾರಿಯಾ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 19:30 IST
Last Updated 21 ಜನವರಿ 2011, 19:30 IST

ಬೆಂಗಳೂರು:  ಸಿರಾಮಿಕ್ ಟೈಲ್ ತಯಾರಿಸುವ ಕಜಾರಿಯಾ ಸಿರಾಮಿಕ್ಸ್ ಲಿಮಿಟೆಡ್  (ಕೆಸಿಎಲ್) ಯೂರೋಪ್‌ನ ಪ್ರಮುಖ ಬ್ರಾಂಡ್ ಆಗಿರುವ ವಿಟ್ರಾದ ಉತ್ಪನ್ನಗಳನ್ನು ದೇಶಿ ಮಾರುಕಟ್ಟೆಯಲ್ಲಿ  ಪರಿಚಯಿಸಲು ಒಪ್ಪಂದ ಮಾಡಿಕೊಂಡಿದೆ.

ನೈರ್ಮಲ್ಯ ಸಾಧನಗಳು ಮತ್ತು ಸ್ನಾನದ ಮನೆಯ ಸಲಕರಣೆಗಳ ವಿಲಾಸಿ,  ದುಬಾರಿ  ಉತ್ಪನ್ನಗಳ ವಿಭಾಗದಲ್ಲಿ ದೇಶದಾದ್ಯಂತ ವಹಿವಾಟು ವಿಸ್ತರಿಸಿ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೆ ಏರಲು ಈ ಒಪ್ಪಂದವು ನೆರವಾಗಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ  ನಿರ್ದೇಶಕ ಅಶೋಕ್ ಕಜಾರಿಯಾ ತಿಳಿಸಿದ್ದಾರೆ.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ‘ವಾಸ್ತುಶಿಲ್ಪ, ನಿರ್ಮಾಣ - ಎಂಜಿನಿಯರಿಂಗ್’ನ ಮೂರು ದಿನಗಳ ಸಮಾವೇಶದ ಸಂದರ್ಭದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ADVERTISEMENT

ವಿಟ್ರಾ ಜತೆಗಿನ ಸಹಯೋಗದ ಫಲವಾಗಿ ಗುಡಗಾಂವ್‌ನಲ್ಲಿ ದೇಶದ ಮೊದಲ ಜಂಟಿ  ಷೋರೂಂ ಆರಂಭಿಸಲಾಗಿದೆ. ಬೆಂಗಳೂರಿನ ಫೋರಂ ಮಾಲ್‌ನಲ್ಲಿ ದೇಶದ 2ನೇ ಷೋರೂಂ ಆರಂಭಿಸಲಾಗುತ್ತಿದೆ.ಕರ್ನಾಟಕದಲ್ಲಿ ಶೀಘ್ರವೇ ಸಂಸ್ಥೆಯ ತಯಾರಿಕಾ ಘಟಕ ಆರಂಭಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.