ADVERTISEMENT

ವಿದೇಶಿ ನಗದು ಸಂಗ್ರಹ ಇಳಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2012, 19:30 IST
Last Updated 11 ನವೆಂಬರ್ 2012, 19:30 IST

ಮುಂಬೈ (ಐಎಎನ್‌ಎಸ್): ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಒಮ್ಮೆಗೇ ಭಾರಿ ಇಳಿಕೆಯಾಗಿದೆ.

ನವೆಂಬರ್ 2ಕ್ಕೆ ಕೊನೆಗೊಂಡ ವಾರದಲ್ಲಿ 95.03 ಕೋಟಿ ಅಮೆರಿಕನ್ ಡಾಲರ್‌ನಷ್ಟು ವಿದೇಶಿ ನಗದು ಪ್ರಮಾಣ ಕಡಿಮೆ ಆಗಿದ್ದು, ಒಟ್ಟು ಸಂಗ್ರಹ 29434 ಕೋಟಿ ಡಾಲರ್‌ಗೆ ಬಂದಿದೆ.

ಇದಕ್ಕೂ ಹಿಂದಿನ ವಾರದಲ್ಲಿ ವಿದೇಶಿ ವಿನಿಮಯ ಸಂಗ್ರಹಕ್ಕೆ 35.94 ಕೋಟಿ ಡಾಲರ್ ಸೇರಿದ್ದರಿಂದ ಒಟ್ಟಾರೆ ಸಂಗ್ರಹ 29529 ಕೋಟಿ ಡಾಲರ್‌ಗೆ ಏರಿದ್ದಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.