ADVERTISEMENT

ವಿದೇಶಿ ವಿನಿಮಯ ಸಂಗ್ರಹ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 5 ಮೇ 2012, 19:30 IST
Last Updated 5 ಮೇ 2012, 19:30 IST

ಮುಂಬೈ(ಐಎಎನ್‌ಎಸ್): ದೇಶದ ವಿದೇಶಿ ವಿನಿಮಯ ಸಂಗ್ರಹ ಏಪ್ರಿಲ್ 27ಕ್ಕೆ ಕೊನೆಗೊಂಡ ವಾರದಲ್ಲಿ 75.80 ಕೋಟಿ ಡಾಲರ್‌ನಷ್ಟು ಏರಿಕೆಯಾಗಿ, 295.36 ಕೋಟಿ ಡಾಲರ್‌ಗಳಷ್ಟಾಗಿದೆ (ರೂ. 15.7  ಲಕ್ಷ ಕೋಟಿ) ಎಂದು ಭಾರತೀಯ  ರಿಸರ್ವ್ ಬ್ಯಾಂಕ್ ಶನಿವಾರ ಹೇಳಿದೆ.

ಇದೇ ಅವಧಿಯಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ದೇಶದ ಮೀಸಲು 87ಲಕ್ಷ ಡಾಲರ್‌ಗಳಷ್ಟು ಏರಿಕೆಯಾಗಿದ್ದು,  2.91ಕೋಟಿ ಡಾಲರ್‌ಗೆ (ರೂ. 1.5 ಲಕ್ಷ ಕೋಟಿ) ಏರಿದೆ. ಡಾಲರ್ ಎದುರು ರೂಪಾಯಿ ದುರ್ಬಲಗೊಳ್ಳುತ್ತಿರುವುದು ವಿನಿಮಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.