ADVERTISEMENT

ವಿದೇಶಿ ವಿನಿಮಯ ಸಂಗ್ರಹ: 33 ಕೋಟಿ ಡಾಲರ್ ಖಾಲಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಮುಂಬೈ (ಐಎಎನ್‌ಎಸ್): ದೇಶದಲ್ಲಿನ ವಿದೇಶಿ ವಿನಿಮಯ ಸಂಗ್ರಹದಲ್ಲಿ ಜುಲೈ 6ಕ್ಕೆ ಕೊನೆಗೊಂಡ ಒಂದು ವಾರದ ಅವಧಿಯಲ್ಲಿ 33.65 ಕೋಟಿ ಡಾಲರ್‌ನಷ್ಟು ಕಡಿಮೆ ಆಗಿದ್ದು, ಒಟ್ಟಾರೆ ಸಂಗ್ರಹ ಪ್ರಮಾಣ 28762 ಕೋಟಿ ಡಾಲರ್‌ಗೆ ಬಂದಿದೆ.

ರೂಪಾಯಿಯ ಮೌಲ್ಯ ಕುಸಿತಕ್ಕೆ ತಡೆಯೊಡ್ಡಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಸಂಗ್ರಹದಲ್ಲಿದ್ದ ಡಾಲರ್‌ಗಳನ್ನು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡಿದ್ದೇ ವಿನಿಮಯ ಸಂಗ್ರಹ ಕಡಿಮೆ ಆಗಲು ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.