ADVERTISEMENT

ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ನವದೆಹಲಿ(ಪಿಟಿಐ):ದೇಶೀಯ ವಿಮಾನ ಸಂಚಾರ ದಟ್ಟಣೆ ಜನವರಿ, ಫೆಬ್ರುವರಿಯಲ್ಲಿ ಶೇ3.57ರಷ್ಟು ಕುಸಿದಿದೆ. ಒಟ್ಟು 1.01 ಕೋಟಿ ಪ್ರಯಾಣಿಕರು ದೇಶೀಯ ವಿಮಾನಗಳಲ್ಲಿ ಸಂಚರಿಸಿದ್ದಾರೆ. ಕಿಂಗ್‌ಫಿಷರ್ ಏರ್‌ಲೈನ್ಸ್ ಸೇವೆ ಸ್ಥಗಿತಗೊಂಡಿರುವುದು ಕೂಡ ವಿಮಾನ ಸಂಚಾರ ಪ್ರಮಾಣ ತಗ್ಗಲು ಪ್ರಮುಖ ಕಾರಣ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ಹೇಳಿದೆ. ಫೆಬ್ರುವರಿಯಲ್ಲಿ ಏರ್ ಇಂಡಿಯಾ ಮಾರುಕಟ್ಟೆ ಪಾಲು ಶೇ 18.9ಕ್ಕೆ ತಗ್ಗಿದ್ದು, 4ನೇ ಸ್ಥಾನಕ್ಕೆ ಕುಸಿದಿದೆ. ಶೇ 27.4ರಷ್ಟು ಪಾಲಿನೊಂದಿಗೆ ಇಂಡಿಗೊ ಮೊದಲ ಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.