ADVERTISEMENT

ವಿಮಾ ಕಂಪನಿಗಳ ಸ್ಪರ್ಧೆಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ವಿಮೆ ಮಾರುಕಟ್ಟೆಯಲ್ಲಿ ಇತರ ಸಂಸ್ಥೆಗಳ  ಪಾಲನ್ನು ಕಸಿದುಕೊಳ್ಳುವ ಉದ್ದೇಶದಿಂದ ಕಡಿಮೆ ಕಂತಿನ ವಿಮಾ ಪಾಲಿಸಿಗಳನ್ನು ನೀಡುವ ಮೂಲಕ ವಿಮಾ ಕಂಪನಿಗಳು ಪರಸ್ಪರ ನಡೆಸುತ್ತಿರುವ `ಆತ್ಮಹತ್ಯಾಕಾರಿ ಸ್ವರೂಪದ ಸ್ಪರ್ಧೆ~ಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸರ್ಕಾರ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಐಆರ್‌ಡಿಎ) ಸೂಚಿಸಿದೆ.

`ವಿಮಾ ಕಂಪನಿಗಳ ನಡುವೆ ನಡೆಯುತ್ತಿರುವ ಆತ್ಮಹತ್ಯಾಕಾರಿ ಸ್ವರೂಪದ ತೀವ್ರ ಸ್ಪರ್ಧೆ ಮತ್ತು ಅನಾರೋಗ್ಯಕರ ಪೈಪೋಟಿ ಹತ್ತಿಕ್ಕಲು ನಿಯಂತ್ರಣ ಪ್ರಾಧಿಕಾರವು ಸೂಕ್ತಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ~ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ `ಐಆರ್‌ಡಿಎ~ಗೆ ಸೂಚಿಸಿದ್ದಾರೆ.

ದೇಶದಲ್ಲಿ ವಿಮಾ ಸಂಸ್ಥೆಗಳ ನಡುವೆ ನಡೆಯುತ್ತಿರುವ ಅನಾರೋಗ್ಯಕರ ಪೈಪೋಟಿಯು ಆಯಾ ಕಂಪನಿಗಳ  ಲೆಕ್ಕಪತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲು ಆರಂಭಿಸಿದೆ ಎಂದೂ ಸಚಿವರು ಅಭಿಪ್ರಾಯ ಪಟ್ಟಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.