ADVERTISEMENT

ವಿಶ್ವ ಉಕ್ಕು ತಯಾರಿಕೆ ಅಲ್ಪ ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2014, 19:30 IST
Last Updated 23 ಫೆಬ್ರುವರಿ 2014, 19:30 IST
ವಿಶ್ವ ಉಕ್ಕು ತಯಾರಿಕೆ ಅಲ್ಪ ಇಳಿಕೆ
ವಿಶ್ವ ಉಕ್ಕು ತಯಾರಿಕೆ ಅಲ್ಪ ಇಳಿಕೆ   

ನವದೆಹಲಿ(ಪಿಟಿಐ): ಜಾಗತಿಕ ಉಕ್ಕು ತಯಾರಿಕೆ ಜನವರಿ­ಯಲ್ಲಿ ಶೇ 0.4ರಷ್ಟು ತಗ್ಗಿದ್ದು, 1297 ಲಕ್ಷ ಟನ್‌ಗಳಿಗೆ ಇಳಿಕೆ ಕಂಡಿದೆ. ಚೀನಾದಲ್ಲಿ ತಯಾರಿಕೆ ಕುಸಿದಿ ರುವುದೇ ವಿಶ್ವದ ಒಟ್ಟಾರೆ ಉಕ್ಕು ಪ್ರಮಾಣ ಇಳಿಕೆ­ಯಾಗಲು ಕಾರಣ. ಆದರೆ, ಭಾರತ­ದಲ್ಲಿ 69 ಲಕ್ಷ ಟನ್‌ ಉಕ್ಕು ತಯಾರಿಕೆ ಆಗಿದ್ದು, ಹಿಂದಿನ ವರ್ಷದ ಸ್ಥಿತಿಯೇ ಮುಂದು­ವರಿದಿದೆ ಎಂದು ಜಾಗತಿಕ ಉಕ್ಕು ಸಂಘಟನೆ (ಡಬ್ಲ್ಯುಎಸ್‌ಎ) ಹೇಳಿದೆ.

ಚೀನಾದ ಒಟ್ಟು ಉಕ್ಕು ತಯಾರಿಕೆ  ಜನವರಿಯಲ್ಲಿ ಶೇ 3.2ರಷ್ಟು ಕುಸಿ­ದಿ ದ್ದು, 616 ಲಕ್ಷ ಟನ್‌ಗಳಿಗೆ ಇಳಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 636 ಲಕ್ಷ ಟನ್‌ಗಳಷ್ಟು ಉಕ್ಕು ತಯಾರಿಕೆ ಆಗಿತ್ತು. ‘ಡಬ್ಲ್ಯುಎಸ್‌ಎ’ ಅಂಕಿ ಅಂಶಗಳ ಪ್ರಕಾರ ಜನವರಿಯಲ್ಲಿ ಜಪಾನ್‌ಲ್ಲಿ 94 ಲಕ್ಷ ಟನ್‌ ಮತ್ತು ದಕ್ಷಿಣ ಕೊರಿಯಾ­ದಲ್ಲಿ 60 ಲಕ್ಷ ಟನ್‌ ಉಕ್ಕು ತಯಾರಿಕೆ ಆಗಿದೆ.

ಯೂರೋಪ್‌ ಒಕ್ಕೂಟದ ಒಟ್ಟಾರೆ ತಯಾರಿಕೆ ಶೇ 7.3ರಷ್ಟು ಹೆಚ್ಚಿದ್ದು 144 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. ಜರ್ಮನಿಯಲ್ಲಿ 37 ಲಕ್ಷ ಟನ್‌ ಮತ್ತು ಇಟಲಿಯಲ್ಲಿ 22 ಲಕ್ಷ ಟನ್‌ ಉಕ್ಕು ತಯಾರಿಕೆ ಆಗಿದೆ. ಟರ್ಕಿಯಲ್ಲಿ 28 ಲಕ್ಷ ಟನ್‌ಗಳಷ್ಟು ಕಚ್ಚಾ ಉಕ್ಕು ತಯಾರಿಕೆ ಆಗಿದೆ. ರಷ್ಯಾದಲ್ಲಿ 59 ಲಕ್ಷ ಟನ್‌­ಗ ಳಷ್ಟು ಉಕ್ಕು ತಯಾರಿಕೆ ನಡೆದಿದೆ ಎಂದು  ‘ಡಬ್ಲ್ಯುಎಸ್‌ಎ’ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.