ADVERTISEMENT

ವಿಶ್ವ ಕುಬೇರರ ಪಟ್ಟಿಯಲ್ಲಿ 55 ಮಂದಿ ಭಾರತೀಯರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

ವಾಷಿಂಗ್ಟನ್ (ಐಎಎನ್‌ಎಸ್): ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಮುಖೇಶ್ ಅಂಬಾನಿ ಮತ್ತು ಅಜೀಂ ಪ್ರೇಮ್‌ಜಿ ಅವರು ಸೇರಿದಂತೆ ಭಾರತದ 55 ಮಂದಿ ಸಿರಿವಂತರು   2011ನೇ ಸಾಲಿನ ವಿಶ್ವ ಕುಬೇರ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಫೋಬ್ಸ್ ಪತ್ರಿಕೆ ಪಟ್ಟಿ ಮಾಡಿರುವ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೆಕ್ಸಿಕೊದ ದೂರಸಂಪರ್ಕ ರಂಗದ ದೊರೆ ಕಾರ್ಲೊಸ್ ಸ್ಲಿಮ್, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಎರಡನೇ ವರ್ಷವೂ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

  ಒಟ್ಟು 74 ಶತಕೋಟಿ ಡಾಲರ್‌ಗಳಷ್ಟು (್ಙ 3,33,000 ಕೋಟಿ) ಸಂಪತ್ತಿನ ಒಡೆಯರಾಗಿರುವ ಸ್ಲಿಮ್ ಅವರ ನಿವ್ವಳ ಆಸ್ತಿಯು ಕಳೆದ ಒಂದೇ ವರ್ಷದಲ್ಲಿ 20.5 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ.

 ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ 56 ಶತಕೋಟಿ ಡಾಲರ್‌ಗಳಷ್ಟು (್ಙ 2,52,000 ಕೋಟಿ) ಸಂಪತ್ತು ಹೊಂದಿ 2ನೇ ಸ್ಥಾನದಲ್ಲಿ ಮತ್ತು ಬಕ್‌ಶೈರ್ ಹ್ಯಾಥ್‌ವೇ ಇಂಕ್‌ನ ಮುಖ್ಯಸ್ಥ ವಾರನ್ ಬಫೆಟ್ ಅವರು 50 ಶತಕೋಟಿ ಡಾಲರ್ಗ್‌ಳೊಂದಿಗೆ  (್ಙ 2,25,000 ಕೋಟಿ) 3ನೇ ಸ್ಥಾನದಲ್ಲಿ ಇದ್ದಾರೆ.

ವಿಶ್ವದ ಅತಿದೊಡ್ಡ ಉಕ್ಕು ತಯಾರಿಕಾ ಸಂಸ್ಥೆಯ ಮಾಲೀಕ ಲಕ್ಷ್ಮಿ ಮಿತ್ತಲ್ ಅವರು ್ಙ1,39,500 ಕೋಟಿಗಳೊಂದಿಗೆ 6ನೇ ಸ್ಥಾನ, ಮುಖೇಶ್ ಅಂಬಾನಿ ್ಙ 1,21,500 ಕೋಟಿಗಳೊಂದಿಗೆ 9ನೇ ಸ್ಥಾನ ಮತ್ತು ವಿಪ್ರೊ ಟೆಕ್ನಾಲಜೀಸ್‌ನ ಅಜೀಂ ಪ್ರೇಮ್‌ಜಿ ್ಙ 76,500 ಕೋಟಿಗಳೊಂದಿಗೆ 36ನೇ ಸ್ಥಾನದಲ್ಲಿದ್ದಾರೆ.

ಇವರು ತಮ್ಮದೇ ಆದ ಅಜೀಮ್ ಪ್ರೇಮ್‌ಜಿ ಫೌಂಡೇಷನ್‌ಗೆ  ಅಂದಾಜು ್ಙ 9000 ಕೋಟಿಗಳಷ್ಟು ಮೌಲ್ಯದ ಷೇರುಗಳನ್ನು ದಾನವಾಗಿ ನೀಡುವ ಮೂಲಕ ಏಷ್ಯಾದ ಅತಿ ದೊಡ್ಡ ದಾನಿ ಎನ್ನುವ ಅಭಿವಾದನಕ್ಕೂ ಪಾತ್ರವಾಗಿದ್ದಾರೆ ಎಂದು ಪತ್ರಿಕೆ ಬಣ್ಣಿಸಿದೆ.

10 ಶ್ರೀಮಂತರು: ಫೋಬ್ಸ್ ಪತ್ರಿಕೆಯಲ್ಲಿ ಸ್ಥಾನ ಪಡೆದಿರುವ  10 ಪ್ರಮುಖ ಶ್ರೀಮಂತರಲ್ಲಿ  ಶಶಿ ಮತ್ತು ರವಿ ರೂಯಿಯಾ (16 ಶತಕೋಟಿ ಡಾಲರ್), ಸಾವಿತ್ರಿ ಜಿಂದಾಲ್ ಮತ್ತವರ ಕುಟುಂಬ (13 ಶತಕೋಟಿ),  ಗೌತಮ್ ಅದನಿ (10 ಶತಕೋಟಿ),  ಕುಮಾರ್ ಮಂಗಳಂ (9.2 ಶತಕೋಟಿ), ಸುನಿಲ್ ಮಿತ್ತಲ್ ಮತ್ತು ಕುಟುಂಬ (8.3 ಶತಕೋಟಿ), ಆದಿ ಗೋದ್ರೇಜ್ ಮತ್ತವರ ಕುಟುಂಬವು (7.3 ಶತಕೋಟಿ ಡಾಲರ್) ಸೇರಿವೆ.

 ಸದ್ಯಕ್ಕೆ ವಿಶ್ವದಲ್ಲಿ 1,210 ಕುಬೇರರು ಇದ್ದಾರೆ. 2010ರಲ್ಲಿ ಈ ಸಿರಿವಂತರ ಪಟ್ಟಿಗೆ  214 ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ.

 ಅಮೆರಿಕದ 413 ಮಂದಿ ಈ ಪಟ್ಟಿಯಲ್ಲಿದ್ದು, ಈಗಲೂ ಮುಂಚೂಣಿಯಲ್ಲಿದ್ದರೆ, 332 ಕುಬೇರರೊಂದಿಗೆ ಏಷ್ಯಾ 2ನೇ ಸ್ಥಾನದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.