ನವದೆಹಲಿ (ಪಿಟಿಐ): ಈ ವಾರ ಮೂರು ದಿನಗಳ ಕಾಲ ಬ್ಯಾಂಕಿಂಗ್ ವಹಿವಾಟು ನಡೆಯದ ಹಿನ್ನೆಯಲ್ಲಿ, ಶನಿವಾರ (ಏ. 7) ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದಿನಪೂರ್ತಿ ವಹಿವಾಟು ನಡೆಸಲಿವೆ.
ಶನಿವಾರದಂದು ವಾಡಿಕೆಯ ಅರ್ಧ ದಿನ ಬದಲಿಗೆ, ಇತರ ದಿನಗಳಂತೆ ಪೂರ್ಣ ಪ್ರಮಾಣದಲ್ಲಿ ಬ್ಯಾಂಕಿಂಗ್ ವಹಿವಾಟು ನಡೆಸಬೇಕು ಎಂದು ಹಣಕಾಸು ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೂಚಿಸಿದೆ.
ಸಾಮಾನ್ಯವಾಗಿ ಶನಿವಾರ ಬ್ಯಾಂಕ್‌ಗಳು ಬೆಳಿಗ್ಗೆ 10ರಿಂದ 1 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಸೋಮವಾರ ವಾರ್ಷಿಕ ಲೆಕ್ಕಪತ್ರ ತಪಾಸಣೆಗೆ, ಏ. 4ರಂದು ಮಹಾವೀರ ಜಯಂತಿಯ ರಜೆ ಕಾರಣಕ್ಕೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸಿಲ್ಲ. ಏ. 6ರಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.