ADVERTISEMENT

ಶಿಡ್ಲಘಟ್ಟ: ರೇಷ್ಮೆಗೂಡು ಬೆಲೆ ದಿಢೀರ್ ಕುಸಿತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:55 IST
Last Updated 26 ಫೆಬ್ರುವರಿ 2011, 16:55 IST

ಕೋಲಾರ: ರೇಷ್ಮೆ ಗೂಡುಗಳ ಬೆಲೆ ದಿಢೀರನೆ ಕುಸಿದು ಬೆಳೆಗಾರರು ಆತಂಕಕ್ಕೀಡಾದ ಘಟನೆ ನಗರದ ರೇಷ್ಮೆ ಮಾರುಕಟ್ಟೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ರೇಷ್ಮೆ ಮಾರುಕಟ್ಟೆಯಲ್ಲಿ ಶನಿವಾರ ನಡೆದಿದೆ.

ಶುಕ್ರವಾರ ಕೆ.ಜಿ. ರೇಷ್ಮೆ ಗೂಡಿಗೆ ರೂ 340ರಿಂದ rರೂ 345ರವರೆಗೆ ಇತ್ತು. ಶನಿವಾರ ದಿಢೀರನೆ ರೂ 50ರಿಂದ ರೂ 60ರಷ್ಟು ಬೆಲೆ ಕುಸಿದಿದೆ. ಅದಕ್ಕೆ ಕಾರಣ ತಿಳಿದುಬಂದಿಲ್ಲ.

‘250ರಿಂದ 300 ಕೆ.ಜಿ ಗೂಡು ಬೆಳೆದಿದ್ದೆ. ಇದೀಗ ಬೆಲೆ ಕುಸಿದಿರುವುದರಿಂದ ಅಪಾರ ನಷ್ಟ ಎದುರಾಗಿದೆ’ ಎಂದು ತಾಲ್ಲೂಕಿನ ಕುರ್ಕಿ ಗ್ರಾಮದ ಬೆಳೆಗಾರ ದೇವರಾಜ್ ವಿಷಾದ ವ್ಯಕ್ತಪಡಿಸಿದರು. ಉತ್ತಮ ಗುಣಮಟ್ಟದ ರೇಷ್ಮೆ ಗೂಡಿನ ಬೆಲೆ ಕೆ.ಜಿ.ಗೆ ರೂ 50-60 ರೂಪಾಯಿ ಕಡಿಮೆಯಾಗಿದೆ. ಗುಣಮಟ್ಟ ಕಡಿಮೆ ಇರುವ ಗೂಡಿನ ಬೆಲೆ ರೂ 200ಕ್ಕೆ ಇಳಿದಿದೆ ಎಂದು ಬೊಮ್ಮನಹಳ್ಳಿಯ ಬೆಳೆಗಾರ ವೆಂಕಟಪ್ಪ ತಿಳಿಸಿದರು.

ಹರಾಜು ಸಂದರ್ಭದಲ್ಲಿ ರೀಲರ್ ಬೆಲೆ ಕೂಗಿದಾಷ್ಟೆ ಬೆಲೆ ಕುಸಿದಿರುವುದು ಗೊತ್ತಾಗುತ್ತದೆ. ಇವತ್ತು ಬೆಲೆ ಕುಸಿದಿರುವುದಕ್ಕೆ ಕಾರಣ ಗೊತ್ತಾಗಿಲ್ಲ ಎಂದು ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ   ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.