ADVERTISEMENT

ಶೇ 13ರಷ್ಟು ವೇತನ ಏರಿಕೆ ಸಾಧ್ಯತೆ: ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:30 IST
Last Updated 9 ಮಾರ್ಚ್ 2011, 18:30 IST

ನವದೆಹಲಿ (ಪಿಟಿಐ): ಭಾರತದ ನೌಕರರ ಪಾಲಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಕಂಪೆನಿಗಳು ಉದ್ಯೋಗಿಗಳ ವೇತನವನ್ನು ಶೇ 12.75ರಷ್ಟು ಹೆಚ್ಚಿಸುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತದೆ ಜಾಗತಿನ ಮಾನವಸಂಪನ್ಮೂಲ ಸಲಹಾ ಸಂಸ್ಥೆ ‘ಆನ್ ಹೆವಿಟ್’ ನಡೆಸಿದ ಸಮೀಕ್ಷೆ.

ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಉತ್ತಮ ಪ್ರಗತಿ ದಾಖಲಿಸಿರುವ ಹಿನ್ನೆಲೆಯಲ್ಲಿ, ಉದ್ದಿಮೆಗಳು ಗರಿಷ್ಠ ಲಾಭ ದಾಖಲಿಸಿವೆ. ಈ ವರ್ಷ ಎಂಜಿನಿಯರಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ   ಶೇ 14ರಷ್ಟು ವೇತನ ಹೆಚ್ಚಾಗುವ  ಸಾಧ್ಯತೆ ಇದೆ. ಏಷ್ಯಾ ಪೆಸಿಫಿಕ್ ವಲಯದ ಚೀನಾದಲ್ಲಿ ಶೇ 9ರಷ್ಟು, ಫಿಲಿಪ್ಪೀನ್ಸ್‌ನಲ್ಲಿ ಶೇ 7ರಷ್ಟು ಹಾಗೂ ಪ್ರಪಂಚದಲ್ಲಿಯೇ ಹೆಚ್ಚಿನ ಪ್ರಮಾಣದ ವೇತನ ಹೆಚ್ಚಳ ಭಾರತದಲ್ಲಿ ಆಗಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ವಾಹನ ತಯಾರಿಕೆ, ಇಂಧನ, ತೈಲ ಕ್ಷೇತ್ರದ ನೌಕರರಿಗೆ ಹೆಚ್ಚಿನ ವೇತನ ಲಭಿಸಲಿದೆ. ಮಾಹಿತಿ ತಂತ್ರಜ್ಞಾನ ಮತ್ತು  ಹೊರಗುತ್ತಿಗೆ (ಐಐಟಿಇಎಸ್)  ಕ್ಷೇತ್ರದಲ್ಲಿ ಶೇ 12ರಷ್ಟು ವೇತನ ಹೆಚ್ಚಳ ನಿರೀಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.