ADVERTISEMENT

ಷೇರುಪೇಟೆ: ಖರೀದಿ ಆಸಕ್ತಿ ಸಂವೇದಿ ಸೂಚ್ಯಂಕ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಮುಂಬೈ (ಪಿಟಿಐ): ಎರಡು ವಹಿವಾಟಿನ ದಿನಗಳ ಕುಸಿತದ ನಂತರ ಚೇತರಿಸಿಕೊಂಡಿರುವ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 154 ಅಂಶಗಳಷ್ಟು ಏರಿಕೆ ಕಂಡಿತು.

ಇನ್ಫೋಸಿಸ್, ಆರ್‌ಐಎಲ್ ಮತ್ತಿತರ ಪ್ರಮುಖ ಷೇರುಗಳಲ್ಲಿನ ಖರೀದಿ ಆಸಕ್ತಿ ಫಲವಾಗಿ ಸಂವೇದಿ ಸೂಚ್ಯಂಕವು ದಿನದಂತ್ಯಕ್ಕೆ 16,939 ಅಂಶಗಳಿಗೆ ಏರಿಕೆ ಕಂಡಿತು. ಆಟೊಮೊಬೈಲ್, ತಂತ್ರಜ್ಞಾನ, ತೈಲ, ನೈಸರ್ಗಿಕ ಅನಿಲ ಷೇರುಗಳಲ್ಲಿಯೂ ಖರೀದಿ ಭರಾಟೆ ಕಂಡು ಬಂದಿತು.

ಎಸ್‌ಬಿಐ, ಎಲ್‌ಆಂಡ್‌ಟಿ, ಕೋಲ್ ಇಂಡಿಯಾ, ಸನ್ ಫಾರ್ಮಾ, ಎಚ್‌ಡಿಎಫ್‌ಸಿ ಮತ್ತಿತರ ಷೇರುಗಳ ಬೆಲೆಗಳು ಕುಸಿತ ಕಂಡವು.

ಯೂರೋಪ್‌ನ ಸಾಲದ ಬಿಕ್ಕಟ್ಟು ಬಗೆಹರಿಯುವ ಸೂಚನೆಗಳು ಪೇಟೆಯಲ್ಲಿ ಖರೀದಿ ಉತ್ಸಾಹ ಮರಳಲು ಕಾರಣವಾಯಿತು.

ದಿನದ ಒಂದು ಹಂತದಲ್ಲಿ 300 ಅಂಶಗಳಷ್ಟು ಏರಿಕೆ ಕಂಡಿದ್ದ (17,104.88 ಅಂಶಗಳಿಗೆ)  ಸೂಚ್ಯಂಕವು ದಿನದಂತ್ಯದಲ್ಲಿನ ಲಾಭ  ಉದ್ದೇಶದ ಮಾರಾಟ ಒತ್ತಡದ ಕಾರಣಕ್ಕೆ ಅರ್ಧದಷ್ಟು ಗಳಿಕೆ ಕಳೆದುಕೊಂಡಿತು.
ಶುಕ್ರವಾರದ ವಹಿವಾಟಿನಲ್ಲಿ ಏಷ್ಯಾಮತ್ತು ಅಮೆರಿಕದ ಷೇರು ಮಾರುಕಟ್ಟೆಗಳು ಗಮನಾರ್ಹ ಗಳಿಕೆ ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.