ADVERTISEMENT

ಷೇರುಪೇಟೆ: ಸೂಚ್ಯಂಕ ಏರಿಕೆ

ಪಿಟಿಐ
Published 10 ಅಕ್ಟೋಬರ್ 2017, 19:35 IST
Last Updated 10 ಅಕ್ಟೋಬರ್ 2017, 19:35 IST

ಮುಂಬೈ : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 78 ಅಂಶಗಳ ಚೇತರಿಕೆ ಕಂಡಿದೆ.

ದೇಶಿ ಸಾಂಸ್ಥಿಕ ಹಣಕಾಸು ಸಂಸ್ಥೆಗಳ ನಿರಂತರ ಖರೀದಿ ಕಾರಣಕ್ಕೆ ಸೂಚ್ಯಂಕವು ಎರಡು ತಿಂಗಳ ಗರಿಷ್ಠ ಮಟ್ಟಕ್ಕೆ  31, 924 ಅಂಶಗಳಿಗೆ ತಲುಪಿದೆ. ಈ ಹಿಂದಿನ ಎರಡು ವಹಿವಾಟು ದಿನಗಳಲ್ಲಿ ಸೂಚ್ಯಂಕವು 254 ಅಂಶಗಳ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 28 ಅಂಶಗಳ ಏರಿಕೆ ದಾಖಲಿಸಿ 10 ಸಾವಿರ ಅಂಶಗಳ ಗಡಿ (10,034) ದಾಟಿದೆ. ಸೆಪ್ಟೆಂಬರ್‌ 21ರ ನಂತರ ಮೊದಲ ಬಾರಿಗೆ ‘ನಿಫ್ಟಿ’ ಈ ಮಟ್ಟಕ್ಕೆ ತಲುಪಿದೆ. ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆಯ ಫಲಿತಾಂಶಗಳು ಸದ್ಯದಲ್ಲೇ ಪ್ರಕಟಗೊಳ್ಳಲಿವೆ.  ಷೇರುಗಳ ಖರೀದಿಗೆ  ಚಿಲ್ಲರೆ ಹೂಡಿಕೆದಾರರು ಮುಂದಾಗಲಿದ್ದಾರೆ. ಏಷ್ಯಾದ ಷೇರು ಮಾರುಕಟ್ಟೆಗಳಲ್ಲಿ ಸ್ಥಿರ ವಹಿವಾಟು ನಡೆಯುತ್ತಿರುವುದರಿಂದ ಷೇರುಪೇಟೆಗಳು ಸತತ ಮೂರನೇ ವಹಿವಾಟಿನ ದಿನವೂ ಏರಿಕೆ ದಾಖಲಿಸಿವೆ.

ADVERTISEMENT

ಐ.ಟಿ, ವಿದ್ಯುತ್‌, ಆರೋಗ್ಯ ರಕ್ಷಣೆ, ಭಾರಿ ಯಂತ್ರೋಪಕರಣ, ತೈಲ ಮತ್ತು ನೈಸರ್ಗಿಕ ಅನಿಲ, ಬ್ಯಾಂಕ್‌ ಮತ್ತು ವಾಹನ ಉದ್ದಿಮೆ ಷೇರುಗಳು ಲಾಭ ಬಾಚಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.