ADVERTISEMENT

ಷೇರುವಿಕ್ರಯ: 30 ಸಾವಿರ ಕೋಟಿ ಸಂಗ್ರಹ ಗುರಿ?

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಒಟ್ಟು ರೂ 30 ಸಾವಿರ ಕೋಟಿ ಸಂಗ್ರಹಿಸುವ ಗುರಿ ಸರ್ಕಾರದ ಮುಂದಿದೆ.

ಹಣಕಾಸು ಸಚಿವಾಲಯದ ಮೂಲಗಳು ಈ ಸುಳಿವು ನೀಡಿವೆ. ಆದರೆ, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಅಂದಾಜಿಸಲಾಗಿದ್ದ ರೂ 40 ಸಾವಿರ ಕೋಟಿ ಗುರಿ ತಲುಪಲು ಸಾಧ್ಯವಿಲ್ಲ ಎಂದೂ ಹೇಳಿದೆ.  ಇದೇ 16ರಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಲಿರುವ ಬಜೆಟ್‌ನಲ್ಲಿ ಮುಂದಿನ ಹಣಕಾಸು ವರ್ಷದ ಷೇರು ವಿಕ್ರಯದ ಅಂಕಿ ಅಂಶಗಳ ಸ್ಪಷ್ಟ ಚಿತ್ರಣ ಲಭಿಸಲಿದೆ.  ಈಗಾಗಲೇ ಮಧ್ಯಂತರ ಹಣಕಾಸು ನೀತಿ ಆಧರಿಸಿ 2013ರಲ್ಲಿ ರೂ30 ಸಾವಿರ ಕೋಟಿ ಮತ್ತು 2014ರಲ್ಲಿ ರೂ25 ಸಾವಿರ ಕೋಟಿ ಷೇರು ವಿಕ್ರಯ ಬಂಡವಾಳ ಹರಿದು ಬರಲಿದೆ ಎಂದು ಪ್ರಣವ್ ಹೇಳಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟಿನಿಂದ ಷೇರು ವಿಕ್ರಯಕ್ಕೆ ಹಿನ್ನಡೆ ಉಂಟಾಗಿದೆ. ಸದ್ಯಕ್ಕೆ ಸರ್ಕಾರದ ಸಾಮಾನ್ಯ ಸಾಲವು ಆರ್ಥಿಕ ವೃದ್ಧಿ ದರದ (ಜಿಡಿಪಿ) ಶೇ 66ರಷ್ಟಾಗಿದೆ. ಆದರೆ, ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ಕೇಂದ್ರೋದ್ಯಮ ಸಂಸ್ಥೆಗಳ ಬ್ಯಾಂಕ್ ಉಳಿತಾಯವು  ಸುಮಾರು ರೂ2.84 ಲಕ್ಷ ಕೋಟಿಗಳಷ್ಟಿದೆ ಎಂದು ಪ್ರಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.