ADVERTISEMENT

ಸಂವೇದಿ ಸೂಚ್ಯಂಕ ಗರಿಷ್ಠ ಕುಸಿತ

ಪಿಟಿಐ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಸಂವೇದಿ ಸೂಚ್ಯಂಕ ಗರಿಷ್ಠ ಕುಸಿತ
ಸಂವೇದಿ ಸೂಚ್ಯಂಕ ಗರಿಷ್ಠ ಕುಸಿತ   

ಮುಂಬೈ: ಸಿಗರೇಟ್‌ ಮೇಲೆ ಹೆಚ್ಚುವರಿ ಸೆಸ್‌ ವಿಧಿಸಿರುವುದು ಷೇರುಪೇಟೆ ವಹಿವಾಟಿನ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ.   ಸೂಚ್ಯಂಕಗಳು ಸಾರ್ವಕಾಲಿಕ ದಾಖಲೆ ಮಟ್ಟದಿಂದ ಕುಸಿತ ಕಂಡಿವೆ.

ಸೋಮವಾರ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಪ್ರತಿ ಒಂದು ಸಾವಿರ ಸಿಗರೇಟ್‌ಗಳಿಗೆ ₹485 ರಿಂದ ₹792ರ ಮಧ್ಯೆ ಸೆಸ್‌ ವಿಧಿಸಲಾಗಿದೆ. ಇದು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಈ ಸುದ್ದಿಯು ವಹಿವಾಟು ಇಳಿಕೆ ಕಾಣುವಂತೆ ಮಾಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ)364 ಅಂಶ ಇಳಿಕೆ ಕಂಡಿದೆ.  ಎಂಟು ತಿಂಗಳಲ್ಲಿ ದಿನದ ವಹಿವಾಟಿನಲ್ಲಿ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ. 31,711 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 89 ಇಳಿಕೆಯಾಗಿ 9,827 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸೂಚ್ಯಂಕಗಳು ಗರಿಷ್ಠ ಮಟ್ಟದಲ್ಲಿದ್ದಾಗ ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಸಿದರು. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಷೇರುಗಳು ಕೂಡ ಇಳಿಕೆ ಕಾಣುವಂತಾಯಿತು.

ಐಟಿಸಿ ಷೇರು ಗರಿಷ್ಠ ಇಳಿಕೆ
ಸಿಗರೇಟ್‌ ಮೇಲೆ ಗರಿಷ್ಠ ಸೆಸ್‌ ವಿಧಿಸಿರುವುದರಿಂದ ಐಟಿಸಿ ಕಂಪೆನಿ ಷೇರುಗಳು ಶೇ 13 ರಷ್ಟು ಗರಿಷ್ಠ ಕುಸಿತಕ್ಕೆ ಒಳಗಾಯಿತು.  ಪ್ರತಿ ಷೇರು ₹284.60 ರಂತೆ ಮಾರಾಟವಾಯಿತು. ಮಾರುಕಟ್ಟೆ ಮೌಲ್ಯದಲ್ಲಿ ಸಂಸ್ಥೆಗೆ ₹ 50 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ. ಗಾಡ್‌ಫ್ರೇ ಫಿಲಿಪ್ಸ್‌ ಮತ್ತು ವಿಎಸ್‌ಟಿ ಇಂಡಸ್ಟ್ರೀಸ್‌ ಕಂಪೆನಿ ಷೇರುಗಳು ಶೇ 7.83 ರಷ್ಟು ಇಳಿಕೆ ಕಂಡಿವೆ.

ವಲಯವಾರು ಎಫ್‌ಎಂಸಿಜಿ ಶೇ 6.12, ರಿಯಲ್‌ ಎಸ್ಟೇಟ್‌ ಶೇ 1.10, ತೈಲ ಮತ್ತು ಅನಿಲ ಶೇ 0.79, ಗ್ರಾಹಕ ಬಳಕೆ ವಸ್ತುಗಳು ಶೇ 0.66, ವಿದ್ಯುತ್‌ ಶೇ 0.60 ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಶೇ 0.33 ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.