
ಪ್ರಜಾವಾಣಿ ವಾರ್ತೆನವದೆಹಲಿ(ಪಿಟಿಐ): ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮುಂದಿನ ಮಾರುಕಟ್ಟೆ ವರ್ಷದಲ್ಲಿ (2012ರ ಅಕ್ಟೋಬರ್-2013ರ ಸೆಪ್ಟೆಂಬ್ಟರ್ ನಡುವಿನ ಅವಧಿ) ದೇಶದಲ್ಲಿ ಸಕ್ಕರೆ ಉತ್ಪಾದನೆ 10 ಲಕ್ಷ ಟನ್‌ನಷ್ಟು ಕಡಿಮೆ ಆಗುವ ಸಂಭವವಿದೆ.
ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ 2.60 ಕೋಟಿ ಟನ್ ಸಕ್ಕರೆ ಇಳುವರಿ ನಿರೀಕ್ಷೆ ಇದ್ದಿತು. ಆದರೆ, ಈವರೆಗೆ 2.57 ಕೋಟಿ ಟನ್ ಉತ್ಪಾದನೆ ಆಗಿದೆ. ಮುಂದಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಬಾರದೇ ಇರುವ ಸಾಧ್ಯತೆ ಇದೆ ಎಂದು ಸಕ್ಕರೆ ಕಾರ್ಖಾನೆಗಳ ಪ್ರಾತಿನಿಧಿಕ ಸಂಸ್ಥೆ `ಐಎಸ್‌ಎಂಎ~ ಸೋಮವಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.