ADVERTISEMENT

ಸಟಾರೆಂ- ಎಸ್‌ಎ ಇಂಡಿಯಾ ಸಹಭಾಗಿತ್ವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 18:15 IST
Last Updated 16 ಫೆಬ್ರುವರಿ 2011, 18:15 IST

ಬೆಂಗಳೂರು: ಸ್ವಿಟ್ಜರ್‌ಲೆಂಡ್ ಮೂಲದ ಸಟಾರೆಂ ಎ.ಜಿ ಕಂಪೆನಿಯು ಭಾರತದಲ್ಲಿ ವಾಣಿಜ್ಯ ಬಳಕೆಯ ಗಾಳಿ ವಿದ್ಯುತ್ ಉತ್ಪಾದನೆಗಾಗಿ ಎಸ್‌ಎ ಇಂಡಿಯಾ ಜತೆ ಬುಧವಾರ ಇಲ್ಲಿ ಸಹಭಾಗಿತ್ವ ಪ್ರಕಟಿಸಿದೆ.

ಸುಧಾರಿತ ‘ವಿಂಡ್‌ಸ್ಯಾಟ್’ ತಂತ್ರಜ್ಞಾನ ಬಳಸಿ ಪರಿಸರ ಸ್ನೇಹಿ ವಿಧಾನದಲ್ಲಿ ವಿದ್ಯುತ್ ಉತ್ಪಾದಿಸಲಾಗುವುದು. ಸಾಂಪ್ರದಾಯಿಕ ಪವನ ವಿದ್ಯುತ್ ಉತ್ಪಾದನಾ ಘಟಕ್ಕೆ ಹೋಲಿಸಿದರೆ ಇಲ್ಲಿನ ಉತ್ಪಾದನಾ ವೆಚ್ಚ ಶೇ 30ರಷ್ಟು ಅಗ್ಗ. ಶಬ್ದ ಮಾಲಿನ್ಯ ಕಡಿಮೆ.  ವಸತಿ ಸಮುಚ್ಚಯ, ಚಿಕ್ಕ ಪ್ರಮಾಣದ ಕೈಗಾರಿಕಾ ಪ್ರದೇಶಗಳಿಗೆ ‘ವಿಂಡ್‌ಸ್ಯಾಟ್’ ಅಳವಡಿಸಿಕೊಳ್ಳಬಹುದು  ಎಂದು ಸೆಟಾರೆಂ  ಅಧ್ಯಕ್ಷ ಜೆರೋಮ್ ಫ್ರಿಲರ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.