ADVERTISEMENT

ಸಹಾರಾ ವಿರುದ್ಧ ಹರಿಹಾಯ್ದ ಸುಪ್ರೀಂ

ಹೂಡಿಕೆದಾರರಿಗೆ ನೀಡಿದ ₨22,885 ಕೋಟಿ ಮೂಲ ಯಾವುದು?

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ನವದೆಹಲಿ(ಪಿಟಿಐ): ವಿದೇಶ ಪ್ರವಾಸಕ್ಕೆ ಅವಕಾಶ ಕೊಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸಹಾರಾ ಸಮೂಹ ಮುಖ್ಯಸ್ಥ ಸುಬ್ರತೊ ರಾಯ್‌ ಈಗ ಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ.

ರಾಯ್‌ ವಿದೇಶ ಪ್ರವಾಸದ ಮೇಲಿನ ನಿಷೇಧ ಮುಂದುವರಿಸಿರುವ ಕೋರ್ಟ್‌, ಹೂಡಿಕೆದಾರರಿಗೆ ಹಿಂದಿರುಗಿಸಲಾಗಿದೆ ಎಂದು ಹೇಳಲಾಗಿರುವ ₨22,885 ಕೋಟಿಯ ಮೂಲ ಬಹಿರಂಗಪಡಿಸಿ ಎಂದು ಹೇಳಿದೆ.

ಹಣದ ಮೂಲ ಬಹಿರಂಗಪಡಿಸದಿ ದ್ದರೆ ಸಿಬಿಐ ಅಥವಾ ಕಂಪೆನಿಗಳ ರಿಜಿ ಸ್ಟ್ರಾರ್‌ರಿಂದ ತನಿಖೆಗೆ ಸಿದ್ಧವಾಗಿ ಎಂಬ ಎಚ್ಚರಿಕೆಯನ್ನೂ ಕೋರ್ಟ್‌ ನೀಡಿದೆ.

ಸಿಬಿಐ ತನಿಖೆ ಎಚ್ಚರಿಕೆ: ‘ಕಂಪೆನಿ ಹಣ ಹಿಂದಿರುಗಿಸಲೇಬೇಕು. ಈಗ ಕಂಪೆನಿಗಳ ರಿಜಿಸ್ಟ್ರಾರ್‌ ಅವರನ್ನು ಸಂಪರ್ಕಿಸಿ ಹಿಂದಿ ರುಗಿಸಿದ ಹಣದ ಮೂಲ ತಿಳಿದುಕೊ ಳ್ಳಲು ಸೂಚಿಸುತ್ತೇವೆ. ಇಡೀ ವಹಿವಾಟು ಬಗ್ಗೆ ಸಿಬಿಐ ತನಿಖೆಗೂ ಆದೇಶಿಸುತ್ತೇವೆ’ ಎಂದು ನ್ಯಾಯಮೂರ್ತಿ ರಾಧಾಕೃಷ್ಣನ್‌ ಮತ್ತು ಜೆ.ಎಸ್‌.ಕೇಹರ್‌ ಅವರನ್ನೊಳ ಗೊಂಡ ಪೀಠ ಹೇಳಿದೆ.

‘ಹಣದ ಮೂಲ ಮುಖ್ಯವಲ್ಲ ಎಂದು ಸೆಬಿಗೆ ಸಹಾರಾ ಪತ್ರ ಬರೆದಿದೆ. ಇದು ಸಹಾರಾ ಸಮೂಹ ಮತ್ತು ರಾಯ್‌ ಧಾರ್ಷ್ಟ್ಯ ತೋರುತ್ತದೆ. ಹಣ ಹಿಂದಿರುಗಿ ಸಿದ್ದರೆ ಹಣ ಎಲ್ಲಿಂದ ಬಂತು ಎಂಬ ದಾಖಲೆ ಹೊಂದಿರಬೇಕು. ನಿಮ್ಮ ವರ್ತನೆ ಆಶ್ಚರ್ಯ ತರುವಂತಿದೆ’ ಎಂದು ನ್ಯಾಯ ಪೀಠ ಹರಿಹಾಯ್ದಿದೆ.

‘ಹಣ ಕೊಡದೆ ಬಿಡೆವು’: ‘ನ್ಯಾಯಾ ಲಯ ಅಸಹಾಯಕವಲ್ಲ. ನಮ್ಮ ಆದೇಶ ಪೂರ್ಣ ಪಾಲನೆಯಾಗುವಂತೆ ನೋಡಿ ಕೊಳ್ಳುತ್ತೇವೆ’ ಎಂಬ ಎಚ್ಚರಿಕೆಯನ್ನೂ ಪೀಠ ನೀಡಿದೆ.

‘ಈ ಪ್ರಕರಣದಲ್ಲಿ ಗರಿಷ್ಠ ಸಹನೆ ಪ್ರದರ್ಶಿಸಿದ್ದೇವೆ. ಏನೇ ಆದರೂ ಹೂಡಿಕೆದಾರರಿಗೆ ಹಣ ನೀಡಲೇಬೇಕು ಎಂದು ಪೀಠ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.