ADVERTISEMENT

ಸಾವೆ, ನವಣೆಯಿಂದಲೂ ಬ್ರೆಡ್‌, ಬಿಸ್ಕತ್‌

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 19:59 IST
Last Updated 26 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: ಬೇಕರಿ ತಿನಿಸುಗಳನ್ನು ಸತ್ವ ಯುತ ‘ಆಹಾರ’ ಪದಾರ್ಥಗಳನ್ನಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯ ಸಿದ್ಧತೆ ನಡೆದಿದೆ. ಸಿರಿಧಾನ್ಯಗಳನ್ನು ಬಳಸಿ ಈ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿರುವುದು ವಿಶೇಷ.

ಸಾವೆ, ನವಣೆ ಮೊದಲಾದ ಧಾನ್ಯ ಗಳನ್ನು ಬಳಸಿ ಬ್ರೆಡ್‌, ಬಿಸ್ಕತ್‌, ರಸ್ಕ್‌ ಸಿದ್ಧಪಡಿಸಲಾಗಿದೆ. ಅಲ್ಲದೆ ಬೆಳಗಿನ ಉಪಾಹಾರಕ್ಕೆ ಬಳಸುವ ಫ್ಲೆಕ್ಸ್‌ಗಳನ್ನೂ ಸಿರಿಧಾನ್ಯದಿಂದ ತಯಾರಿಸಲಾಗಿದೆ.

ವಿ.ವಿ.ಯ ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೋಷಣಾ ವಿಭಾಗ ಈ ಆರೋ ಗ್ಯಕರ ತಿನಿಸುಗಳನ್ನು ಸಿದ್ಧಪಡಿಸಿದೆ. ಇವೆ ಲ್ಲವನ್ನೂ ಪ್ರಯೋಗಾಲಯದಲ್ಲಿ ಪರೀ ಕ್ಷೆಗೆ ಒಳಪಡಿಸಲಾಗಿದ್ದು, ಬೆಳಗಾವಿಯ ಕೆಎಲ್‌ಇ, ಧಾರವಾಡದ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯಗಳ ಪ್ರಯೋಗಶಾಲೆಗಳಿಂದ ಮನ್ನಣೆಯೂ ದೊರೆತಿದೆ.

‘ಬೇಕರಿ ಪದಾರ್ಥಗಳಲ್ಲಿ ಮೈದಾ ಮತ್ತು ಡಾಲ್ಡಾ ಹೆಚ್ಚಾಗಿ ಬಳಕೆಯಾಗು ತ್ತಿದೆ. ಅವೆರಡೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಮೈದಾದಲ್ಲಿ ಯಾವುದೇ ಸತ್ವ ಇರುವುದಿಲ್ಲ. ಡಾಲ್ಡಾದಲ್ಲಿ ಟ್ರಾನ್ಸ್‌ ಫ್ಯಾಟ್‌ ಇದ್ದು, ಬೊಜ್ಜು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚು. ಆದರೆ ರುಚಿಕರವಾದ ತಿನಿಸುಗಳನ್ನು ಬಿಡಲು ಮಕ್ಕಳಿಗೆ ಮನಸ್ಸು ಇರುವುದಿಲ್ಲ. ಹೀಗಾಗಿ ಮೈದಾ ಜತೆ ಸಾವಿ ಅಕ್ಕಿಯಂಥ ನಾರಿನ ಅಂಶ(ಫೈಬರ್) ಇರುವ ಧಾನ್ಯಗ ಳನ್ನು ಬಳಸಿ ಈ ಪದಾರ್ಥಗಳನ್ನು ತಯಾರಿಸಿದ್ದೇವೆ. ಡಾಲ್ಡಾ ಬದಲಿಗೆ ಬೆಣ್ಣೆ ಬಳಸಲಾಗಿದೆ. ಹಾಗಾಗಿ ಇವು ಆರೋಗ್ಯಕಾರಿ ತಿನಿಸುಗಳಾಗಿವೆ’ ಎಂದು ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಮುಖ್ಯಸ್ಥೆ ಪುಷ್ಪಾ ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಈಗಾ ಗಲೇ ಬೇಕರಿ ಪದಾರ್ಥ ತಯಾರಿಕಾ ಘಟಕವಿದ್ದು, ಇದರ ಮೂಲಕ ಈ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ.

ವಾಣಿಜ್ಯ ಉದ್ದೇಶಕ್ಕಲ್ಲ
ವಿ.ವಿ. ಈ ಸಿರಿಧಾನ್ಯದ ತಿನಿಸುಗಳನ್ನು  ವಾಣಿಜ್ಯ ದೃಷ್ಟಿಯಿಂದೇನೂ ಮಾರುಕ ಟ್ಟೆಗೆ ಬಿಡುಗಡೆ ಮಾಡುತ್ತಿಲ್ಲ. ಒಮ್ಮೆ ಈ ಪದಾರ್ಥಗಳು ಜನರಿಗೆ ಹಿಡಿಸಿದಲ್ಲಿ, ಅವುಗಳ ತಯಾರಿಕೆ ಬಗ್ಗೆ ಮಹಿಳೆಯರಿಗೆ ತರಬೇತಿ ನೀಡಿ, ಮಹಿಳಾ ಸ್ವ–ಸಹಾಯ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳ ಮೂಲಕ ತಿನಿಸುಗಳನ್ನು ಮಾರುಕಟ್ಟೆಗೆ ತಲುಪಿಸುವ ಆಶಯ ವಿಶ್ವವಿದ್ಯಾಲಯದ್ದಾಗಿದೆ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.