ADVERTISEMENT

ಸೂಚ್ಯಂಕ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು  ಶುಕ್ರವಾರದ ವಹಿವಾಟಿನಲ್ಲಿ 173 ಅಂಶಗಳಷ್ಟು ಏರಿಕೆ ಕಂಡಿದ್ದು, ಕಳೆದ 14 ವಾರಗಳಲ್ಲೇ  ಗರಿಷ್ಠ ಮಟ್ಟ 17,605 ಅಂಶಗಳಿಗೆ ಏರಿದೆ.

 ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ಚಟುವಟಿಕೆ ಹೆಚ್ಚಿರುವುದು ಸೂಚ್ಯಂಕ ಏರುವಂತೆ ಮಾಡಿದೆ.  ರಿಯಾಲ್ಟಿ, ಬ್ಯಾಂಕಿಂಗ್, ತೈಲ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ವಲಯದ ಷೇರುಗಳು ವಾರಾಂತ್ಯದ ವಹಿವಾಟಿನಲ್ಲಿ ಲಾಭ ಮಾಡಿಕೊಂಡವು.

`ಎಫ್‌ಐಐ~ ಹೂಡಿಕೆದಾರರು  ಬುಧವಾರದ ವಹಿವಾಟಿನಲ್ಲಿ  ್ಙ2,092 ಕೋಟಿ ಮೊತ್ತದ ಹೂಡಿಕೆ ಮಾಡಿದ್ದು, ಗುರುವಾರದ ವಹಿವಾಟಿನಲ್ಲಿ ರೂ 2,134 ಕೋಟಿ ಮೊತ್ತದ ಷೇರು ಖರೀದಿಸಿದ್ದಾರೆ ಎಂದು ಮಾರುಕಟ್ಟೆ ನಿಯಂತ್ರಕ `ಸೆಬಿ~ ಹೇಳಿದೆ. ಡಾಲರ್ ಎದುರು  ರೂಪಾಯಿ ಮೌಲ್ಯ ಏರುತ್ತಿರುವುದು ಕೂಡ ಪೇಟೆಗೆ ಬಲ ತುಂಬಿದೆ.

ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಒಟ್ಟಾರೆ 741 ಅಂಶಗಳಷ್ಟು ಏರಿಕೆ ಕಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ಶುಕ್ರವಾರದ ವಹಿವಾಟಿನಲ್ಲಿ 56 ಅಂಶಗಳಷ್ಟು ಚೇತರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.