ಮುಂಬೈ (ಪಿಟಿಐ):ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 194 ಅಂಶಗಳಷ್ಟು ಏರಿಕೆ ಕಂಡಿದ್ದು, ಕಳೆದ 5 ತಿಂಗಳಲ್ಲೇ ಗರಿಷ್ಠ ಮಟ್ಟವಾದ 17,885 ಅಂಶಗಳನ್ನು ತಲುಪಿದೆ.
ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಪರವಾಗಿ ತೀರ್ಪು ಬಂದಿರುವುದು, ದೇಶದ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದು ಮತ್ತು ಚಿಲ್ಲರೆ ಹಣದುಬ್ಬರ ದರ ಇಳಿದಿರುವುದು ವಹಿವಾಟು ಚೇತರಿಸಿಕೊಳ್ಳುವಂತೆ ಮಾಡಿದೆ.
ಎನ್‌ಟಿಪಿಸಿ, ಎಚ್‌ಡಿ ಎಫ್‌ಸಿ, ಟಾಟಾ ಮೋಟಾರ್ಸ್ ಷೇರು ದರಗಳು ದಿನದ ವಹಿವಾಟಿನಲ್ಲಿ ಜಿಗಿತ ಕಂಡವು. ಇನ್ಫೋಸಿಸ್ ಷೇರು ಮೌಲ್ಯ ದಿನದ ವಹಿವಾಟಿನಲ್ಲಿ ಶೇ 2ರಷ್ಟು ಏರಿಕೆ ಕಂಡಿತು. ರಾಷ್ಟ್ರೀಯ ಷೇರು ಸೂಚ್ಯಂಕನಿಫ್ಟಿ~ 54 ಅಂಶಗಳಷ್ಟು ಏರಿಕೆ ಕಂಡು 5421ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.