ADVERTISEMENT

ಸೂಚ್ಯಂಕ ಭರ್ಜರಿ ಏರಿಕೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST
ಸೂಚ್ಯಂಕ ಭರ್ಜರಿ ಏರಿಕೆ
ಸೂಚ್ಯಂಕ ಭರ್ಜರಿ ಏರಿಕೆ   

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 421ಅಂಶಗ ಳಷ್ಟು ಏರಿಕೆ ಕಂಡಿದ್ದು, ಕಳೆದ ಎರಡು ವಾರಗಳಲ್ಲಿ ಗರಿಷ್ಠ ಏರಿಕೆ ದಾಖಲಿಸಿದೆ.

ಹಣದುಬ್ಬರ ತಗ್ಗಿರುವ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ) ಬಡ್ಡಿ ದರ ಕಡಿತಗೊಳಿಸಲಿದೆ ಎನ್ನುವ ಸುದ್ದಿಯು ವಹಿವಾಟಿಗೆ ಬಲ ತುಂಬಿದೆ. ಇದರ ಜತೆಗೆ ಜನವರಿ 15 ರಿಂದ ಷೇರುಪೇಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿರುವ ಕ್ರಮವೂ ಹೂಡಿಕೆದಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಭರ್ಜರಿ ಚೇತರಿಕೆಯಿಂದ ಮಂಗಳವಾರ   ಹೂಡಿಕೆದಾರರ ಸಂಪತ್ತು ರೂ1.5 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. 

ಹೊಸ ವರ್ಷದ ಮೊದಲ ದಿನ ಸೂಚ್ಯಂಕ 63 ಅಂಶಗಳಷ್ಟು ಚೇತರಿಸಿಕೊಂಡಿತ್ತು. ಮಂಗಳವಾರ ಈ ಗಳಿಕೆ ಶೇ 2.72ರಷ್ಟು ಏರುವುದರೊಂದಿಗೆ 15,939 ಅಂಶಗಳಿಗೆ ವಹಿವಾಟು ಕೊನೆಗೊಂಡಿದೆ. ದಿನದ ವಹಿವಾಟಿನಲ್ಲಿ ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ 2.37ರಷ್ಟು ಏರಿಕೆ ಕಂಡವು.  ಹಣದುಬ್ಬರ ಏರಿಕೆ, ತೈಲ ಬೆಲೆ ಹೆಚ್ಚಳ ಮತ್ತು ರೂಪಾಯಿ ಅಪಮೌಲ್ಯ ಇತ್ಯಾದಿ ಸಂಗತಿಗಳಿಂದ ಕಳೆದ ವರ್ಷ ಷೇರುಪೇಟೆ ಶೇ 25ರಷ್ಟು ಕುಸಿತ ಕಂಡಿತ್ತು. ಹೊಸ ವರ್ಷದ ಆರಂಭದಲ್ಲೇ ಗಣನೀಯ ಏರಿಕೆ ಕಂಡಿರುವುದರಿಂದ ಮತ್ತೆ ಪೇಟೆಯಲ್ಲಿ ಉತ್ಸಾಹ ಕಾಣಿಸಿಕೊಂಡಿದೆ. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 128 ಅಂಶಗಳಷ್ಟು ಏರಿಕೆ ಕಂಡು 4,765 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಬ್ಯಾಂಕ್ ಮತ್ತು ಲೋಹ ವಲಯದ ಸೂಚ್ಯಂಕ ಕ್ರಮವಾಗಿ ಶೇ 4.35ಮತ್ತು 5ರಷ್ಟು ಏರಿಕೆ ಕಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.