ADVERTISEMENT

ಸೂಚ್ಯಂಕ 620 ಅಂಶ ಏರಿಕೆ

ಪಿಟಿಐ
Published 12 ಮೇ 2018, 19:30 IST
Last Updated 12 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಚೇತರಿಕೆ ಹಾದಿಗೆ ಮರಳಿದ್ದು, ಉತ್ತಮ ಗಳಿಕೆಯೊಂದಿಗೆ ವಾರದ ವಹಿವಾಟು ಅಂತ್ಯಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕವು (ಬಿಎಸ್‌ಇ) ವಾರದ ವಹಿವಾಟಿನಲ್ಲಿ 620 ಅಂಶ ಜಿಗಿತ ಕಂಡು 35,535 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವು (ಎನ್ಎಸ್‌ಇ) ನಿಫ್ಟಿ 188 ಅಂಶ ಹೆಚ್ಚಾಗಿ 10, 806 ಅಂಶಗಳಿಗೆ ಏರಿಕೆಯಾಯಿತು.

ADVERTISEMENT

ಕರ್ನಾಟಕ ವಿಧಾನಸಭಾ ಚುನಾವಣೆಯಿಂದಾಗಿ ಈ ವಾರ ಆತಂಕದಲ್ಲಿಯೇ ವಹಿವಾಟು ನಡೆದರೂ ಗೂಳಿ ಓಟಕ್ಕೆ ಅಡ್ಡಿಯಾಗಲಿಲ್ಲ. ರೂಪಾಯಿ ಮೌಲ್ಯ ಇಳಿಕೆ, ಕಚ್ಚಾ ತೈಲ ದರ ಏರಿಕೆ, ಅಮೆರಿಕದ ಬಾಂಡ್‌ ಗಳಿಕೆ ಹಾಗೂ ಮಧ್ಯಪೂರ್ವ ಭಾಗದಲ್ಲಿ ಮೂಡಿರುವ ರಾಜಕೀಯ ಬಿಕ್ಕಟ್ಟಿನ ಪ್ರಭಾವವಿದ್ದರು ಸಹ ವಹಿವಾಟು ನಿಯಂತ್ರಣದಲ್ಲಿತ್ತು.

ಲಾಭ ಗಳಿಕೆ ಉದ್ದೇಶದ ವಹಿವಾಟಿನಿಂದಾಗಿ ಗುರುವಾರ ಸೂಚ್ಯಂಕ ಅಲ್ಪ ಇಳಿಕೆ ಕಂಡಿತ್ತು. ಆದರೆ ಕೆಲವು ಕಂಪನಿಗಳ ತ್ರೈಮಾಸಿಕದ ಆರ್ಥಿಕ ಸಾಧನೆ ನಿರೀಕ್ಷಿತ ಮಟ್ಟ ತಲುಪಿದ್ದರಿಂದ ಶುಕ್ರವಾರ ದೇಶಿ ಸಾಂಸ್ಥಿಕ ಹೂಡಿಕೆ ಹೆಚ್ಚಾಯಿತು. ಇದರಿಂದ ಸಕಾರಾತ್ಮಕ ಮಟ್ಟದಲ್ಲಿಯೇ ವಾರದ ವಹಿವಾಟು ಅಂತ್ಯಕಾಣುವಂತಾಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.