ADVERTISEMENT

ಸ್ಮಾರ್ಟ್‌ ವಾಟರ್‌ ಹೀಟರ್‌ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2016, 19:30 IST
Last Updated 27 ಜೂನ್ 2016, 19:30 IST

ಬೆಂಗಳೂರು: ಗ್ರಾಹಕ ಬಳಕೆ ವಿದ್ಯುತ್‌ ಉಪಕರಣಗಳನ್ನು ತಯಾರಿಸುವ ಪ್ರಮುಖ ಕಂಪೆನಿ ವಿ–ಗಾರ್ಡ್‌, ದೇಶದ ಮೊದಲ ಸ್ಮಾರ್ಟ್‌ ವಾಟರ್‌ ಹೀಟರ್‌ ‘ವೆರಾನೊ’ ಬಿಡುಗಡೆ ಮಾಡಿದೆ.

ದಕ್ಷಿಣ ಭಾರತದ ಗೃಹ ಉಪಕರಣಗಳ ಮಾರಾಟ ಮಳಿಗೆಗಳಲ್ಲಿ ‘ವೆರಾನೊ’ ಶೀಘ್ರವೇ ಲಭ್ಯವಿರಲಿದೆ ಎಂದು ಕಂಪೆನಿ ತಿಳಿಸಿದೆ. ಇದನ್ನು ಮ್ಯಾನುಯಲ್, ರಿಮೋಟ್‌ ಮತ್ತು ವೈಫೈ ಮೂಲಕ ನಿಯಂತ್ರಿಸಬಹುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮಿಥುನ್‌ ಚಿಟ್ಟಲಪಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೆರಾನೊ ವಾಟರ್‌ ಹೀಟರ್‌ ಅನ್ನು  ಸ್ಮಾರ್ಟ್‌ಫೋನ್‌ ಮೂಲಕ ನಿಯಂತ್ರಿಸಲು  ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ವೈಫೈ ಸಂರ್ಪಕದ ಮೂಲಕ ಜಗತ್ತಿನ ಯಾವುದೇ ಮೂಲೆಯಿಂದಲಾದರೂ ಇದನ್ನು ನಿಯಂತ್ರಿಸಬಹುದು. ಬಳಕೆದಾರ ಇ–ಮೇಲ್‌ ನೀಡಿ ಆ್ಯಪ್‌ಗೆ ಲಾಗಿನ್‌ ಆಗಬೇಕು. ಒಂದು ವಾಟರ್‌ ಹೀಟರ್‌ಗೆ ಎರಡು ಫೋನ್‌ ಸಂಪರ್ಕಿಸಬಹುದು.

ಆದರೆ, ಏಕಕಾಲಕ್ಕೆ ಎರಡರಿಂದ ನಿರ್ವಹಣೆ ಸಾಧ್ಯವಿಲ್ಲ. ಒಂದರಲ್ಲಿ ಲಾಗ್‌ಔಟ್‌ ಆದ ಬಳಿಕ ಇನ್ನೊಂದು ಫೋನ್‌ ಬಳಸಿ ನಿಯಂತ್ರಣ ಸಾಧ್ಯ ಎಂದರು. ಸ್ವಯಂಚಾಲಿತ ವೈಫಲ್ಯ ಸೂಚನಾ ವ್ಯವಸ್ಥೆ ಹೊಂದಿದೆ.

ಹೀಗಾಗಿ, ಯಂತ್ರದ ಬಿಡಿಭಾಗಗಳಲ್ಲಿ ದೋಷ ಕಂಡುಬಂದರೆ ತಕ್ಷಣವೇ ಗ್ರಾಹಕರ ಮೊಬೈಲ್‌ಗೆ ಸಂದೇಶ ರವಾನೆಯಾಗುತ್ತದೆ. ಗರಿಷ್ಠ ಪ್ರಮಾಣದ ವಿದ್ಯುತ್‌ ಉಳಿಕೆಗೆ ನೆರವಾಗುತ್ತದೆ. ಡಿಜಿಟಲ್‌ ತಾಪಮಾನ ನಿಯಂತ್ರಣ ಸೌಲಭ್ಯ, ಎಲ್‌ಇಡಿ ಡಿಸ್‌ಪ್ಲೆ ಇದೆ. 15 ಲೀಟರ್‌ ಸಾಮರ್ಥ್ಯದ ಬೆಲೆ ₹16 ಸಾವಿರ ಮತ್ತು 25 ಲೀಟರ್ ಸಾಮರ್ಥ್ಯದ ಬೆಲೆ ₹17,500ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.