ಕೊಯಮತ್ತೂರು (ಪಿಟಿಐ): ಕರ್ನಾಟಕದ ಉತ್ತರ ಭಾಗ ಹಾಗೂ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವೆಡೆಯ ಹತ್ತಿ ಬೆಳೆಗಾರರಲ್ಲಿ ಬಹಳಷ್ಟು ಮಂದಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಬೆಳೆ ಪರಿವರ್ತನೆ ಮಾಡಿದ್ದಾರೆ ಎಂದು `ಭಾರತೀಯ ಹತ್ತಿ ಒಕ್ಕೂಟ' (ಐಸಿಎಫ್) ಗಮನ ಸೆಳೆದಿದೆ.
ಆಂಧ್ರ ಮತ್ತು ಮಹಾರಾಷ್ಟ್ರದ ಹತ್ತಿ ಬೆಳೆಗಾರರಲ್ಲಿ ಹಲವರು ಸೋಯಾಬಿನ್‌ಬಿತ್ತಲಾರಂಭಿಸಿದ್ದಾರೆ. ಉತ್ತರ ಕರ್ನಾಟಕದವರು ಮುಸುಕಿನ ಜೋಳಕ್ಕೆ ಮಾರುಹೋಗಿದ್ದಾರೆ. ಪರಿಣಾಮ ಹತ್ತಿ ಉತ್ಪಾದನೆ ಕಡಿಮೆ ಆಗಿದೆ ಎಂದು `ಐಸಿಎಫ್' ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಈ ಮಧ್ಯೆ ತಮಿಳುನಾಡಿನಲ್ಲಿ ಮಾತ್ರ ಹತ್ತಿ ಕೃಷಿ ಚಟುವಟಿಕೆಯಲ್ಲಿ ಶೇ 20 ರಷ್ಟು ಹೆಚ್ಚಳ ಕಂಡುಬಂದಿದೆ. ತಂಜಾವೂರು ಸುತ್ತಲ ಕೃಷಿಕರು ಭತ್ತ ಬೆಳೆಯುವುದರ ಬದಲು ಹತ್ತಿ ಬಿತ್ತನೆ ಮಾಡುತ್ತಿದ್ದಾರೆ. ಕುರುವೈ ಬೆಳೆಗೆ ನೀರಿನ ಕೊರತೆ ಆಗಿರುವುದರಿಂದ ಇಲ್ಲಿನ ಕೃಷಿಕರು ಭತ್ತಕ್ಕೆ ಬದಲು ಹತ್ತಿ ಆರಿಸಿಕೊಂಡಿದ್ದಾರೆ ಎಂದು ಹೇಳಿದೆ.
ಆದರೆ, ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿನ ಹತ್ತಿ ಬೆಳೆಗಾರರು ದೊಡ್ಡ ಮಟ್ಟದಲ್ಲಿ ಬೆಳೆ ಪರಿವರ್ತನೆ ಮಾಡಲು ನಿರ್ದಿಷ್ಟ ಕಾರಣವೇನು ಎಂಬುದನ್ನು ವರದಿಯಲ್ಲಿ `ಐಸಿಎಫ್' ಸ್ಪಷ್ಟವಾಗಿ ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.