ADVERTISEMENT

ಹೊಸ ಬ್ಯಾಂಕ್ ಸ್ಥಾಪನೆಗೆ 26 ಅರ್ಜಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:59 IST
Last Updated 15 ಜುಲೈ 2013, 19:59 IST

ಮುಂಬೈ (ಪಿಟಿಐ): ಹೊಸ ಬ್ಯಾಂಕ್ ಸ್ಥಾಪನೆಗೆ ಪರವಾನಗಿ ಕೋರಿ ಇದುವರೆಗೆ  26 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಗಾಂಧಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಅಂಚೆ, ಎಲ್‌ಐಸಿ, ಎಚ್‌ಎಫ್‌ಎಲ್, ರಿಲಯನ್ಸ್ ಕ್ಯಾಪಿಟಲ್, ಆದಿತ್ಯಾ ಬಿರ್ಲಾ, ಎಲ್‌ಅಂಡ್‌ಟಿ ಸಂಸ್ಥೆಗಳು ಪರವಾನಗಿ ಕೋರಿ ಅರ್ಜಿ ಸಲ್ಲಿಸಿವೆ ಎಂದು ಅವರು ಹೇಳಿದರು.

ಹೊಸ ಬ್ಯಾಂಕ್ ಸ್ಥಾಪಿಸುವ ಸಂಸ್ಥೆಗಳು ಶೇ 25ರಷ್ಟು ಶಾಖೆಗಳನ್ನು ಬ್ಯಾಂಕಿಂಗ್ ಸೌಲಭ್ಯಗಳು ಇಲ್ಲದ ಗ್ರಾಮೀಣ ಪ್ರದೇಶಗಳಲ್ಲೇ ತೆರೆಯಬೇಕು ಎಂದು `ಆರ್‌ಬಿಐ' ಸೂಚನೆ ನೀಡಿದೆ.  ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆಯನ್ನೂ ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.