ADVERTISEMENT

2014ರಲ್ಲಿ ಹೊಸ ನೇಮಕಾತಿ ಚುರುಕು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST
2014ರಲ್ಲಿ ಹೊಸ ನೇಮಕಾತಿ ಚುರುಕು
2014ರಲ್ಲಿ ಹೊಸ ನೇಮಕಾತಿ ಚುರುಕು   

ಮುಂಬೈ(ಪಿಟಿಐ): ಹಣಕಾಸು ಮಾರು ಕಟ್ಟೆಯಲ್ಲಿನ ಅಸ್ಥಿರತೆಯಿಂದ ಪ್ರಸಕ್ತ ವರ್ಷದಲ್ಲಿ ನಿರೀಕ್ಷಿದಷ್ಟು ಪ್ರಮಾಣದಲ್ಲಿ ನೇಮಕಾತಿ ನಡೆದಿಲ್ಲ. ಈಗ ಪ್ರಮುಖ ಕಂಪೆನಿಗಳ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆ ನಡೆಯು ತ್ತಿರುವ ಸಮಯ. ಹೀಗಾಗಿ ಚುನಾವಣೆ ಗಳು ಮುಗಿದ ಬಳಿಕ ಮುಂದಿನ ವರ್ಷದ ಎರಡನೇ ತ್ರೈಮಾಸಿಕ ಅವಧಿಯಿಂದ ಮತ್ತೆ ಹೊಸ ನೇಮಕ ಪ್ರಕ್ರಿಯೆ ಆರಂಭ ವಾಗಲಿವೆ ಎಂದು ಉದ್ಯೋಗ ಮಾರು ಕಟ್ಟೆ ಸಲಹಾ ಸಂಸ್ಥೆ ‘ಮೈಕಲ್‌ ಪೇಜ್‌’ನ ಭಾರತೀಯ ನಿರ್ದೇಶಕ ನಿಲಯ್‌ ಖಂಡೇಲ್‌ವಾಲ್‌ ಸುದ್ದಿಸಂಸ್ಥೆಗೆ ನೀಡಿ ರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಹೊಸ ಉದ್ಯೋಗ ಆಕಾಂಕ್ಷಿಗಳು ಮತ್ತು ಉದ್ಯೋಗ ಬದಲಿಸಲು ಆಸಕ್ತಿ ಹೊಂದಿರುವವರು ಒಳ್ಳೆಯ ಅವಕಾಶ­ಗಳಿಗಾಗಿ ಇನ್ನು ನಾಲ್ಕೈದು ತಿಂಗಳು ಕಾಯುವುದು ಅನಿವಾರ್ಯ. ಬಹು ರಾಷ್ಟ್ರೀಯ ಕಂಪೆನಿಗಳು ತಮ್ಮ ಅರ್ಧ ವಾರ್ಷಿಕ ಫಲಿತಾಂಶ ಪ್ರಕಟಿಸಿದ ನಂತರ  ಹೊಸ ನೇಮಕಾತಿ ಯೋಜನೆ ಪ್ರಕಟಿಸು ತ್ತವೆ’ ಎಂದು ಅವರು ಹೇಳಿದ್ದಾರೆ.

‘ಪ್ರತಿ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ನೇಮ­ಕಾತಿ ಪ್ರಮಾಣ ಹೆಚ್ಚಿರುತ್ತದೆ. ಆದರೆ, ಈ ಬಾರಿ ಉದ್ಯೋಗಾವಕಾಶಗಳೇ ಕಡಿಮೆ ಇವೆ. ಹೂಡಿಕೆ ಸಂಸ್ಥೆಗಳು, ಬ್ಯಾಂಕುಗಳು, ರಿಯಲ್‌ ಎಸ್ಟೇಟ್‌, ವಿಮೆ, ಐಟಿ ಸೇವಾ ಸಂಸ್ಥೆಗಳು, ಇ–ಕಾಮರ್ಸ್‌ ವಲಯ ಸವಾಲು ಎದುರಿ­ಸುತ್ತಿದ್ದು, ಆದಷ್ಟು ಹೊಸ ನೇಮಕಾತಿ ತಗ್ಗಿಸಲು ಪ್ರಯತ್ನಿಸು ತ್ತಿವೆ.  ಇದ್ದುದರಲ್ಲಿ  ರಿಟೇಲ್‌, ಶಿಕ್ಷಣ, ಆರೋಗ್ಯ ಮತ್ತು ಆತಿಥ್ಯ ವಲಯದಲ್ಲಿ ಮಾತ್ರ ಸರಾಸರಿ  ನೇಮಕಾತಿ  ನಡೆಯು ತ್ತಿವೆ  ಎಂದು  ‘ಟ್ಯಾಲೆಂಟ್‌ ಸ್ಪ್ರಿಂಟ್‌’ ಸಂಸ್ಥೆಯ ‘ಸಿಇಒ’ ಸಂತನು ಪೌಲ್‌ ವಿಶ್ಲೇಷಿಸಿ­ದ್ದಾರೆ.

‘ಅಮೆರಿಕದ ಆರ್ಥಿಕತೆ ಚೇತರಿಕೆ ಕಂಡಿರುವುದು ದೇಶದ ರಫ್ತು ಮಾರು ಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇ ಜನ ನೀಡಲಿದೆ. ಐ.ಟಿ ಸೇವಾ ಸಂಸ್ಥೆಗಳು ಮತ್ತು ರಫ್ತು ಆಧರಿಸಿದ ಕ್ಷೇತ್ರಗಳಲ್ಲಿ ಇದರಿಂದ ನೇಮಕಾತಿ ಹೆಚ್ಚುವ ಸಾಧ್ಯತೆ ಇದೆ’ ಎಂದು ಗ್ಲೋಬಲ್‌ ಹಂಟ್‌ನ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಗೋಯಲ್‌ ಹೇಳಿದ್ದಾರೆ.

‘ಆರ್ಥಿಕ ಅಸ್ಥಿರತೆಯಿಂದ ಕಳೆದ ಎಂಟು ಹತ್ತು ತಿಂಗಳಲ್ಲಿ ಎರಡು ಲಕ್ಷ ಉದ್ಯೋಗಾ­ವಕಾಶಗಳು ನಷ್ಟವಾಗಿವೆ’ ಎಂದಿರುವ ರಾನ್‌ಸ್ಟಡ್‌ ಇಂಡಿಯಾದ ‘ಸಿಇಒ’ ಮೂರ್ತಿ ಕೆ.ಉಪ್ಪಲುರಿ, ‘ಆರ್‌ಬಿಐ’ ನೀತಿ ಮತ್ತು ಉತ್ತಮ ಮುಂಗಾರು ಕೂಡ ಉದ್ಯೋಗ ಮಾರು ಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.