ADVERTISEMENT

3ಜಿ ವಿಡಿಯೊ ಕರೆ ನಿರ್ಬಂಧ: ಎಸ್‌ಯುಎಸ್‌ಪಿಐ ಮಾತುಕತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2010, 12:25 IST
Last Updated 19 ಡಿಸೆಂಬರ್ 2010, 12:25 IST

ನವದೆಹಲಿ (ಪಿಟಿಐ): ‘3ಜಿ’ ಸೇವಾ ಪೂರೈಕೆ ಕಂಪೆನಿಗಳು ಸದ್ಯಕ್ಕೆ ವಿಡಿಯೋ ಕರೆಗಳನ್ನು ಸ್ಥಗಿತಗೊಳಿಸಬೇಕು ಎಂದು ಸರ್ಕಾರ ಸೂಚನೆ ನೀಡಿರುವ ಬೆನ್ನ ಹಿಂದೆಯೇ, ‘ಸಿಡಿಎಂಎ’ ಸೇವೆ ಒದಗಿಸುವ ಭಾರತೀಯ ಏಕೀಕೃತ ದೂರವಾಣಿ ಸೇವಾ ಪೂರೈಕೆ ಕಂಪೆನಿಗಳ ಒಕ್ಕೂಟ (ಎಯುಎಸ್‌ಪಿಐ)  ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ.

‘3ಜಿ’ ಸೇವೆಯಲ್ಲಿ ಲಭ್ಯವಿರುವ ‘ಜಿಮೇಲ್’, ‘ವಿಒಐಪಿ’ ‘ಸ್ಕೈಪ್’     ಬಳಸಿ ಮಾಡುವ ವಿಡಿಯೊ ಕರೆಗಳ ಮೇಲೆ ಆ ಕ್ಷಣಕ್ಕೆ (ರಿಯಲ್ ಟೈಮ್) ನಿಗಾ ವಹಿಸಲು ಸಾಧ್ಯವಾಗುವಂತ ತಂತ್ರಜ್ಞಾನ ಸದ್ಯಕ್ಕಿಲ್ಲ. ಆದರೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಬಗ್ಗೆ ಕಂಪೆನಿಗಳಿಗೆ ಅರಿವಿರುತ್ತದೆ. ‘ನಾವು ಸಚಿವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದೆವು, ಕಂಪೆನಿಗಳು ಇದಕ್ಕೆ ಬೇಕಾದ ತಂತ್ರಜ್ಞಾನ ಅಭಿವೃದ್ಧಿಗೂ ಸಿದ್ದರಿದ್ದಾರೆ. ಆದರೆ, ಒದನ್ನು ಅಭಿವೃದ್ಧಿಪಡಿಸಲು 6ರಿಂದ 9 ತಿಂಗಳು ಸಮಯ ತಗುಲುತ್ತದೆ ಎಂದು ರಾವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.