ADVERTISEMENT

3 ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ

ಪಿಟಿಐ
Published 7 ಮಾರ್ಚ್ 2018, 19:30 IST
Last Updated 7 ಮಾರ್ಚ್ 2018, 19:30 IST
3 ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ
3 ತಿಂಗಳ ಹಿಂದಿನ ಮಟ್ಟಕ್ಕೆ ಸೂಚ್ಯಂಕ   

ಮುಂಬೈ: ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಮಾರಾಟದಲ್ಲಿ ಕಂಡು ಬಂದ ಗಣನೀಯ ಒತ್ತಡ ಮತ್ತು  ಜಾಗತಿಕ ಮಾರುಟ್ಟೆಯ ಪ್ರತಿಕೂಲ ಪರಿಣಾಮಗಳಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರದ ವಹಿವಾಟಿನಲ್ಲಿ 284 ಅಂಶ ಕಳೆದುಕೊಂಡು ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯಿತು.

ಅಮೆರಿಕ ಸರ್ಕಾರದ ಆರ್ಥಿಕ ಸಲಹೆಗಾರ ಗ್ಯಾರಿ ಕಾನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಜಾಗತಿಕ ವಾಣಿಜ್ಯ ಸಮರ ತೀವ್ರಗೊಂಡಿದೆ. ಇದು ಜಾಗತಿಕ ಷೇರುಪೇಟೆಯ ಓಟಕ್ಕೆ ಕಡಿವಾಣ ಹಾಕಿದೆ.

ಆರೋಗ್ಯ ಸೇವೆ, ಇಂಧನ, ಭಾರಿ ಯಂತ್ರೋಪಕರಣ ಬ್ಯಾಂಕಿಂಗ್‌, ಹಾಗೂ ಲೋಹ ಕೇತ್ರಗಳ ಷೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಕುಸಿಯಿತು. ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 95 ಅಂಶ ಕಳೆದುಕೊಂಡು 10,154 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.