ADVERTISEMENT

4ನೇ ದಿನವೂ ಸೂಚ್ಯಂಕ ಕುಸಿತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 19:30 IST
Last Updated 13 ಡಿಸೆಂಬರ್ 2013, 19:30 IST

ಮುಂಬೈ(ಪಿಟಿಐ): ಮೂರು ದಿನಗಳಿಂದ ಇಳಿಜಾರಿನ ಹಾದಿಯಲ್ಲೇ ಸಾಗುತ್ತಿರುವ ಷೇರುಪೇಟೆ, ನಾಲ್ಕನೇ ದಿನವೂ ಹೂಡಿಕೆ ದಾರರಿಗೆ ನಿರಾಶೆ ಉಂಟು ಮಾಡಿತು. ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ ಶುಕ್ರ ವಾರ 210 ಅಂಶಗಳ ಕುಸಿತ ಕಂಡಿದೆ. ಡಿ. 9ರಿಂದ ಈವರೆಗೆ ಒಟ್ಟು 611 ಅಂಶ ಗಳ ನಷ್ಟ ಅನುಭವಿಸಿದೆ.

ದಿನದಂತ್ಯಕ್ಕೆ ಸೂಚ್ಯಂಕ 20,715 ಅಂಶಗಳಿಗೆ ತಗ್ಗಿತು. ಡಿ. 4ರ ನಂತರ ಸೂಚ್ಯಂಕದ ಕನಿಷ್ಠ ಮಟ್ಟ ಇದಾಗಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ದ(ಎನ್‌ಎಸ್‌ಇ) ‘ನಿಫ್ಟಿ’ಯೂ ಶುಕ್ರ ವಾರ 68.65 ಅಂಶಗಳ ಹಾನಿ ಅನುಭ ವಿಸಿ, 6,168.40 ಅಂಶಗಳಲ್ಲಿ ದಿನ ದಂತ್ಯ ಕಂಡಿತು. ಇದು ‘ನಿಫ್ಟಿ’ಯ ವಾರದ ಕನಿಷ್ಠ ಮಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.