ADVERTISEMENT

ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ

ಪಿಟಿಐ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ
ಷೇರುಪೇಟೆ ಪ್ರವೇಶಕ್ಕೆ ಬಂಧನ್ ಬ್ಯಾಂಕ್‌ ಸಿದ್ಧತೆ   

ಕೋಲ್ಕತ್ತ: ಬಂಧನ್‌ ಬ್ಯಾಂಕ್‌, ಮುಂದಿನ ಹಣಕಾಸು ವರ್ಷದಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸಲು ಸಿದ್ಧತೆ ನಡೆಸಿಕೊಂಡಿದೆ.

ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಐಪಿಒಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸಲ್ಲಿಸಿದೆ. ₹ 10ರ ಮುಖಬೆಲೆಯ 11.90 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳಲ್ಲಿ ಷೇರುಗಳನ್ನು ಬಿಡುಗಡೆ ಮಾಡಲಿದೆ.

ಕೋಟಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪೆನಿ, ಆ್ಯಕ್ಸಿಸ್‌ ಕ್ಯಾಪಿಟಲ್‌ ಲಿ., ಗೋಲ್ಡ್‌ ಮನ್‌ ಸ್ಯಾಚ್ಸ್ ಇಂಡಿಯಾ ಸೆಕ್ಯುರಿಟೀಸ್‌ ಐಪಿಒ ನಿರ್ವಹಣೆ ಮಾಡಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.