ADVERTISEMENT

ನೇರ ತೆರಿಗೆ ಸಂಗ್ರಹ ಹೆಚ್ಚಳ

ಪಿಟಿಐ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST

ನವದೆಹಲಿ : ಪ್ರಸಕ್ತ ಆರ್ಥಿಕ ವರ್ಷದ 9 ತಿಂಗಳಿನಲ್ಲಿ (ಏಪ್ರಿಲ್‌–ಡಿಸೆಂಬರ್‌) ನೇರ ತೆರಿಗೆ ಮೂಲಕ ₹ 6.56 ಲಕ್ಷ ಕೋಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ತೆರಿಗೆ ಸಂಗ್ರಹದ ಪ್ರಮಾಣ ಶೇ 18.2 ರಷ್ಟು ಹೆಚ್ಚಾಗಿದೆ.

ಮರುಪಾವತಿ ಹೊಂದಾಣಿಕೆಗೂ ಮುನ್ನ ತೆರಿಗೆ ಸಂಗ್ರಹದ ಪ್ರಮಾಣ ಶೇ 12.6 ರಷ್ಟು ಹೆಚ್ಚಾಗಿದ್ದು, ₹ 7.68 ಲಕ್ಷ ಕೋಟಿಯಷ್ಟಾಗಿದೆ. ಇದರಲ್ಲಿ ₹ 1.12 ಲಕ್ಷ ಕೋಟಿ ಮರುಪಾವತಿ ಮಾಡಲಾಗಿದೆ. ನೇರ ತೆರಿಗೆಯು, ವೈಯಕ್ತಿಕ ಆದಾಯ ತೆರಿಗೆ, ಸಂಪತ್ತು ತೆರಿಗೆ ಮತ್ತು ಕಾರ್ಪೊರೇಟ್‌ ತೆರಿಗೆಗಳನ್ನು ಒಳಗೊಂಡಿದೆ.

ADVERTISEMENT

2017–18ನೇ ಆರ್ಥಿಕ ವರ್ಷಕ್ಕೆ ಬಜೆಟ್‌ ಅಂದಾಜಿನಂತೆ ₹ 9.8 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಬೇಕಿದೆ. ಒಟ್ಟಾರೆ ತೆರಿಗೆಯಲ್ಲಿ ಶೇ 67 ರಷ್ಟು ಪಾಲು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.