ADVERTISEMENT

ಇಂಡಿಯನ್ ಆಯಿಲ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 19:35 IST
Last Updated 18 ಜನವರಿ 2018, 19:35 IST
‘ಐಒಸಿ’ಯ ಅಧ್ಯಕ್ಷ ಸಂಜೀವ್‌ ಸಿಂಗ್‌ ಮತ್ತು ಭಾರತದಲ್ಲಿನ ಇಸ್ರೇಲ್‌ನ ರಾಯಭಾರಿ ಡೇನಿಯಲ್‌ ಕಾರ್ಮನ್‌ ಅವರು ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು
‘ಐಒಸಿ’ಯ ಅಧ್ಯಕ್ಷ ಸಂಜೀವ್‌ ಸಿಂಗ್‌ ಮತ್ತು ಭಾರತದಲ್ಲಿನ ಇಸ್ರೇಲ್‌ನ ರಾಯಭಾರಿ ಡೇನಿಯಲ್‌ ಕಾರ್ಮನ್‌ ಅವರು ಒಪ್ಪಂದದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ), ಇಸ್ರೇಲ್‌ನ ಎರಡು ಸಂಸ್ಥೆಗಳ ಒಪ್ಪಂದ ಮಾಡಿಕೊಂಡಿದೆ.

ಸ್ಟಾರ್ಟ್‌ಅಪ್‌ ಕಂಪನಿ ಫಿನರ್ಜಿ ಮತ್ತು ತಂತ್ರಜ್ಞಾನ ಸಂಸ್ಥೆ ಏಡಾ (ವೈಇಡಿಎ) ಜತೆ ಮಂಗಳವಾರ ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಫಿನರ್ಜಿ ಜತೆಗಿನ ಒಪ್ಪಂದದ ಫಲವಾಗಿ, ‘ಐಒಸಿ’ಯು ದೇಶಿ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಇಂಧನ ಮಾರಾಟ ವ್ಯವಸ್ಥೆ ಅಳವಡಿಸಿಕೊಳ್ಳಲು ನೆರವಾಗಲಿದೆ. ‘ಏಡಾ’ ಸಂಸ್ಥೆ ಜತೆಗಿನ ಸಹಯೋಗವು ಸೌರಶಕ್ತಿ ಮತ್ತು ಪರಿಸರ ಸ್ನೇಹಿ ಇಂಧನ ತಂತ್ರಜ್ಞಾನದ ಸಂಶೋಧನಾ ಕ್ಷೇತ್ರದಲ್ಲಿ ಸಹಕಾರಕ್ಕೆ ನೆರವಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.