ADVERTISEMENT

7ನೇ ವಾರವೂ ಸೂಚ್ಯಂಕ ಏರಿಕೆ

ಪಿಟಿಐ
Published 20 ಜನವರಿ 2018, 19:30 IST
Last Updated 20 ಜನವರಿ 2018, 19:30 IST
7ನೇ ವಾರವೂ ಸೂಚ್ಯಂಕ ಏರಿಕೆ
7ನೇ ವಾರವೂ ಸೂಚ್ಯಂಕ ಏರಿಕೆ   

ಮುಂಬೈ: ಷೇರುಪೇಟೆಗಳು ಸತತ ಏಳನೇ ವಾರವೂ ಏರುಮುಖವಾಗಿ ವಹಿವಾಟು ಅಂತ್ಯಗೊಳಿಸಿವೆ. 5 ದಿನಗಳ ವಾರದ ವಹಿವಾಟಿನಲ್ಲಿ ನಾಲ್ಕು ದಿನವೂ ದಾಖಲೆಯ ಮಟ್ಟದ ವಹಿವಾಟು ನಡೆಯಿತು.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 919 ಅಂಶ ಏರಿಕೆ ಕಂಡು, 35,512 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 213 ಅಂಶ ಹೆಚ್ಚಾಗಿ 10,894 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ಕೈಗಾರಿಕಾ ಪ್ರಗತಿ ನವೆಂಬರ್‌ನಲ್ಲಿ 17 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಇದು ಷೇರುಪೇಟೆಯಲ್ಲಿ ಹೂಡಿಕೆ ಚಟುವಟಿಕೆ ಹೆಚ್ಚಾಗುವಂತೆ ಮಾಡಿದೆ. ಇದರಿಂದಾಗಿ ಷೇರುಪೇಟೆಯ ಮೇಲೆ ಚಿಲ್ಲರೆ ಹಣದುಬ್ಬರ ಏರಿಕೆ ಕಂಡಿರುವ ಪ್ರಭಾವ ಕಡಿಮೆ ಆಗುವಂತೆ ಮಾಡಿತು.

ವ್ಯಾಪಾರ ಕೊರತೆ ಅಂತರ ಹೆಚ್ಚಾಗಿರುವುದು, ಕಚ್ಚಾ ತೈಲ ಬೆಲೆ ಏರಿಕೆ ಆತಂಕ ಸೃಷ್ಟಿಸಿತ್ತು. ಆದರೆ, ಕೇಂದ್ರ ಸರ್ಕಾರ ಮಾರುಕಟ್ಟೆಯಿಂದ ಪಡೆಯುವ ಸಾಲದ ಮೊತ್ತ ತಗ್ಗಿಸಲು ನಿರ್ಧರಿಸಿರುವುದು, ಬ್ಯಾಂಕ್‌ಗಳಲ್ಲಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮಿತಿ ಹೆಚ್ಚಿಸುವ ಕುರಿತಾದ ವರದಿ, ಹಾಗೂ 82ಕ್ಕೂ ಹೆಚ್ಚಿನ ಸರಕು ಮತ್ತು ಸೇವೆಗಳ ಜಿಎಸ್‌ಟಿ ದರ ತಗ್ಗಿಸಿರುವುದು ಸಕಾರಾತ್ಮಕ ವಹಿವಾಟಿಗೆ ಉತ್ತೇಜನ ನೀಡಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.