ADVERTISEMENT

ವಿಐಆರ್‍ ಅಂತರ್ಜಾಲ ತಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 19:44 IST
Last Updated 26 ಜನವರಿ 2018, 19:44 IST
ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್‍ಕೆ ಕೃಷ್ಣಕುಮಾರ್, ಲೆಫ್ಟಿನೆಂಟ್ ಜನರಲ್ ಪಾರ್‍ನಾಯಕ್, ಮೇಜರ್ ಜನರಲ್ ನಿಜ್ಜಾರ್  ಮತ್ತು ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಅವರು ವಿಐಆರ್‌ ಕಾರ್ಡ್‌ ಪರಿಚಯಿಸಿದರು.
ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್‍ಕೆ ಕೃಷ್ಣಕುಮಾರ್, ಲೆಫ್ಟಿನೆಂಟ್ ಜನರಲ್ ಪಾರ್‍ನಾಯಕ್, ಮೇಜರ್ ಜನರಲ್ ನಿಜ್ಜಾರ್ ಮತ್ತು ಬಿಲಿಯರ್ಡ್ಸ್‌ ಆಟಗಾರ ಪಂಕಜ್‌ ಅಡ್ವಾಣಿ ಅವರು ವಿಐಆರ್‌ ಕಾರ್ಡ್‌ ಪರಿಚಯಿಸಿದರು.   

ಬೆಂಗಳೂರು: ಬೆಂಗಳೂರಿನ ವಿಐಆರ್ ಇಂಡಿಯಾ, ಸೇನಾ ಸಿಬ್ಬಂದಿಯ ಬಳಕೆಗಾಗಿಯೇ ತನ್ನ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಅಂತರ್ಜಾಲ ತಾಣ ವಿಐಆರ್‌ಇಂಡಿಯಾಡಾಟ್‌ಕಾಮ್‌ (virindia.com) ಆರಂಭಿಸಿದೆ.

ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ  ಆರ್‍.ಕೆ ಕೃಷ್ಣಕುಮಾರ್ ದಂಪತಿ, ಲೆಫ್ಟಿನೆಂಟ್ ಜನರಲ್ ಪಾರ್‍ನಾಯಕ್, ಮೇಜರ್ ಜನರಲ್ ನಿಜ್ಜಾರ್ ಅವರು ಈ ಅಂತರ್ಜಾಲ ತಾಣ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸೇನಾಪಡೆಗಳಿಗೆಂದೇ ಮೀಸಲಾದ ಡಿಜಿಟಲ್ ಮಾರಾಟ ಜಾಲ ಆರಂಭಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ. ಸೇನಾ ಪಡೆಗಳು, ಅರೆಸೇನಾ ಪಡೆಗಳು, ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು, ನಿವೃತ್ತ ಸೈನಿಕರು ಈ ಅಂತರ್ಜಾಲ ತಾಣದ ಪ್ರಯೋಜನ ಪಡೆದುಕೊಳ್ಳಬಹುದು.

ADVERTISEMENT

ಕಂಪನಿಯು ಹಲವಾರು ಉತ್ಪನ್ನ ತಯಾರಿಕಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿವಿಧ ಬಗೆಯ ರಿಯಾಯ್ತಿ ಮತ್ತು ಮೌಲ್ಯವರ್ಧಿತ ಸೇವೆಗಳನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.