ADVERTISEMENT

ಸೂಚ್ಯಂಕ 539 ಅಂಶ ಏರಿಕೆ

ಪಿಟಿಐ
Published 27 ಜನವರಿ 2018, 19:30 IST
Last Updated 27 ಜನವರಿ 2018, 19:30 IST
ಸೂಚ್ಯಂಕ 539 ಅಂಶ ಏರಿಕೆ
ಸೂಚ್ಯಂಕ 539 ಅಂಶ ಏರಿಕೆ   

ಮುಂಬೈ: ಷೇರುಪೇಟೆಯಲ್ಲಿ ಗೂಳಿ ಓಟಕ್ಕೆ ಯಾವುದೇ ಅಡೆ–ತಡೆ ಇಲ್ಲ. ಕಳೆದ ಎಂಟು ವಾರಗಳಿಂದಲೂ ಸೂಚ್ಯಂಕ ಏರುಮುಖವಾಗಿದ್ದು, ದಿವೂ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯವಾಗುತ್ತಿದೆ.

4 ದಿನಗಳ ವಾರದ ವಹಿವಾಟಿನಲ್ಲಿ ಗುರುವಾರ ಮಾತ್ರವೇ ವಾಯಿದಾ ವಹಿವಾಟಿನ ಪ್ರಭಾವದಿಂದ ಲಾಭ ಗಳಿಕೆ ಒತ್ತಡಕ್ಕೆ ಸೂಚ್ಯಂಕ ಅಲ್ಪ ಇಳಿಕೆ ಕಂಡಿತ್ತು. ಉಳಿದಂತೆ ಮೂರು ದಿನಗಳಲ್ಲಿಯೂ ಏರಿಕೆ ದಾಖಲಿಸಿತ್ತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 539 ಅಂಶ ಏರಿಕೆ ಕಂಡು 36,054 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 175 ಅಂಶ ಏರಿಕೆಯೊಂದಿಗೆ 11,070 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಐಎಂಎಫ್‌ ಮುನ್ನೋಟ: ಭಾರತದ ಆರ್ಥಿಕತೆಯು 2018–19ರಲ್ಲಿ ಶೇ 7.4 ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಲ್ಲಿ ಭಾರತವು ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದೂ ಹೇಳಿದೆ. ಈ ಅಂಶವೂ ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆಯನ್ನು ಹೆಚ್ಚುವಂತೆ ಮಾಡಿದೆ.

ತ್ರೈಮಾಸಿಕ ಫಲಿತಾಂಶ: ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳು ಆರ್ಥಿಕ ಸಾಧನೆಯು ಮಾರುಕಟ್ಟೆ ನಿರೀಕ್ಷೆಯಂತೆಯೇ ಇದೆ. ಇದರಿಂದಾಗಿ ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವು ಹೆಚ್ಚಾಗುತ್ತಿದೆ.

ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ಪ್ರಗತಿಗೆ ಪೂರಕವಾದ ಸುಧಾರಣಾ ಕ್ರಮಗಳು ಘೋಷಣೆಯಾಗುವ ನಿರೀಕ್ಷೆಯೂ ಸಕಾರಾತ್ಮಕ ವಹಿವಾಟಿಗೆ ಕಾರಣ
ವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.