ADVERTISEMENT

Budget: 2027ಕ್ಕೆ ನಮ್ಮ ಆರ್ಥಿಕತೆ 5ಟ್ರಿಲಿಯನ್ ಡಾಲರ್‌ಗೆ ಹೆಚ್ಚಲಿದೆ– ಸಿಂಗ್

ಪಿಟಿಐ
Published 1 ಫೆಬ್ರುವರಿ 2024, 9:43 IST
Last Updated 1 ಫೆಬ್ರುವರಿ 2024, 9:43 IST
<div class="paragraphs"><p> ರಾಜನಾಥ್ ಸಿಂಗ್</p></div>

ರಾಜನಾಥ್ ಸಿಂಗ್

   

ನವದೆಹಲಿ: ಕೇಂದ್ರದ ಮಧ್ಯಂತರ ಬಜೆಟ್‌ ದೇಶದ ಸದೃಢತೆ, ಅಭಿವೃದ್ಧಿ, ವಿಶ್ವಾಸ ಹಾಗೂ ‘ವಿಕಸಿತ ಭಾರತ‘ದ ದೃಷ್ಠಿಕೋನವನ್ನು ಒಳಗೊಂಡಿದ್ದು 2027ರ ವೇಳೆಗೆ ದೇಶದ ಆರ್ಥಿಕತೆಯ ಗಾತ್ರ 5 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಹೇಳಿದ್ದಾರೆ. 

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಮಾಜದ ಪ್ರತಿಯೊಂದು ವರ್ಗಕ್ಕೂ ಬಜೆಟ್‌ನಲ್ಲಿ ಏನಾದರೂ ಒಂದು ಇದೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. 

ADVERTISEMENT

 ಬಜೆಟ್‌ ಬಳಿಕ ಮಾತನಾಡಿದ ಅವರು, ಇದು ಮಧ್ಯಂತರ ಬಜೆಟ್‌ ಆಗಿದ್ದರೂ ನಮ್ಮ ಆರ್ಥಿಕತೆಯ ಮುಂದಿನ ಹಾದಿಯ ಬಗ್ಗೆ ಭರವಸೆಯನ್ನು ಮೂಡಿಸಿದೆ ಎಂದರು. 2030ರ ವೇಳೆಗೆ ನಮ್ಮ ಆರ್ಥಿಕತೆಯ ಗಾತ್ರ 7 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ 2047ರ ವೇಳೆಗೆ ನಮ್ಮ ವಿಕಸಿತ ಭಾರತದ ಗುರಿಯನ್ನು ತಲುಪವುವ ವಿಶ್ವಾಸ ನಮಗೆ ಇದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.