ADVERTISEMENT

ಬಜೆಟ್ | ಕಿಸಾನ್ ಉಡಾನ್‌ನಿಂದ ಯಾವ ಬೋರೇಗೌಡನಿಗೆ ಅನುಕೂಲ?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 14:14 IST
Last Updated 1 ಫೆಬ್ರುವರಿ 2020, 14:14 IST
   

ಬೆಂಗಳೂರು: ದೇಶದಲ್ಲಿ ಸದ್ಯದಕೃಷಿ ಬೆಳವಣಿಗೆ ಶೇ 2.5 ಮಾತ್ರ ಇದ್ದು, ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಬೆಳವಣಿಗೆ ಶೇ.10 ರಷ್ಟಾದರೂ ಇರಬೇಕುಹೀಗಾಗಿ ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ರೈತರ ಹೆಸರಿನಲ್ಲಿ ವರ್ಣರಂಜಿತ ಹೆಸರುಗಳ ಯೋಜನೆ ಘೋಷಿಸಲಾಗಿದ್ದುಕಿಸಾನ್ ಉಡಾನ್‌ನಿಂದ ಸಾಮಾನ್ಯ ರೈತರಿಗೆ ಅನುಕೂಲ ಆಗುತ್ತಾ ? ಈಯೋಜನೆಯಲ್ಲಿ ಯಾವ ಬೋರೇಗೌಡ ತೆಗೆದುಕೊಂಡು ಹೋಗ್ತಾನೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.

ಭೂಮಿ ಗುತ್ತಿಗೆ, ಎಪಿಎಂಸಿ ಅಮೂಲಾಗ್ರ ಬದಲಾವಣೆ, ಮಾರುಕಟ್ಟೆ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದುಇದೆಲ್ಲವೂ ಕೃಷಿ ವಲಯದ ಖಾಸಗೀಕರಣದ ಭಾಗ ಎಂದು ಸಿದ್ಧರಾಮಯ್ಯ ಹೇಳಿದರು.

ADVERTISEMENT

ಇದು ರೈತರು, ಯುವಕರಿಗೆ ಆಶಾದಾಯಕ ಬಜೆಟ್ ಆಗಿಲ್ಲ,ನಿರ್ಮಾಣ, ಉತ್ಪಾದನಾ ವಲಯದಲ್ಲಿ ಹಿಂಜರಿತ ‌ಇರುವುದರಿಂದಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಪ್ರತಿ ಬಜೆಟ್‌ನಲ್ಲೂ ಉದ್ಯೋಗ ಇಳಿಕೆ ಆಗುತ್ತಿರುವುದು ಗೊತ್ತಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿಗೆ ಸಬ್‌ಅರ್ಬನ್‌ ರೈಲು ಮಾಡುತ್ತೇವೆ ಅಂತ ಈ ಬಜೆಟ್‌ನಲ್ಲೂ ಹೇಳಿದ್ದಾರೆ ಆದರೆಕಳೆದ ಬಜೆಟ್‌ನಲ್ಲೂ ಇದನ್ನೇ ಹೇಳಿದ್ದರು. ಕಳೆದ ಸಲ ಒಂದು ರೂಪಾಯಿಯನ್ನು ಕೊಟ್ಟಿರಲಿಲ್ಲ, ಈಗಲೂ ಹಣ ಮೀಸಲಿಟ್ಟಿಲ್ಲ,ಬೆಂಗಳೂರಿನ ಖುಷಿ ಪಡಲಿ ಅಂತ ಮತ್ತೆ ಮತ್ತೆ ಹೇಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹೇಳಿದರು.

ಎಲ್ಲಾ ದೃಷ್ಠಿಕೋನದಲ್ಲೂ ಇದೊಂದು ನಿರಾಶದಾಯಕ ಬಜೆಟ್‌ ಆಗಿದೆ ಎಂದು ಸಿದ್ಧರಾಮಯ್ಯ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.