ADVERTISEMENT

Budget 2024 | ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೇವೆ

ಪಿಟಿಐ
Published 1 ಫೆಬ್ರುವರಿ 2024, 15:49 IST
Last Updated 1 ಫೆಬ್ರುವರಿ 2024, 15:49 IST
REUTERS/ANUSHREE FADNAVIS
   REUTERS/ANUSHREE FADNAVIS

ನವದೆಹಲಿ: ಗಿಗ್‌ ಕಾರ್ಮಿಕರು, ಕಟ್ಟಡ, ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೇವೆ ವಿಸ್ತರಿಸಲು ನಿರ್ಧರಿಸಿರುವ ಕೇಂದ್ರ, ಈ ವರ್ಗದ ಕಾರ್ಮಿಕರ ವಿವರ ಸಂಗ್ರಹಿಸಲು ಪೋರ್ಟಲ್‌ ಆರಂಭಿಸಲು ತೀರ್ಮಾನಿಸಿದೆ.

ಪೋರ್ಟಲ್‌ ಮೂಲಕ ಈ ವರ್ಗದ ಕಾರ್ಮಿಕರ ಸಮಗ್ರ ವಿವರ ಸಂಗ್ರಹಿಸಲಾಗುವುದು. ಆರೋಗ್ಯ ಸೇವೆ, ಸುಲಭ ಸಾಲ ವ್ಯವಸ್ಥೆ, ಆಹಾರ ಮತ್ತಿತರ ಸೇವೆಗಳನ್ನು ಒದಗಿಸಲಾಗುವುದು ಎಂದರು.

ಉಬರ್, ಒಲಾ, ಸ್ವಿಗ್ಗಿ, ಜ್ಯೊಮಾಟೊ, ವಿವಿಧ ಇ–ಕಾಮರ್ಸ್‌ ವೇದಿಕೆಗಳಲ್ಲಿನ ಕಾರ್ಮಿಕರನ್ನು ಗಿಗ್‌ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಇವರು ಸದ್ಯ ಭವಿಷ್ಯ ನಿಧಿ, ಗುಂಪು ವಿಮೆ, ಪಿಂಚಣಿ ಸೌಲಭ್ಯ ವಂಚಿತರಾಗಿದ್ದಾರೆ.

ADVERTISEMENT

ಭಾರತದಲ್ಲಿ ಕಾರ್ಮಿಕರ ಒಟ್ಟು ಬಲ 50 ಕೋಟಿ ಇದ್ದು, ಇವರರಲ್ಲಿ ಕೃಷಿ ಕೂಲಿ, ಗ್ರಾಮೀಣ ನೌಕರರು ಸೇರಿ 40 ಕೋಟಿ ಅಸಂಘಟಿತ ವಲಯದಲ್ಲಿಯೇ ಇದ್ದಾರೆ.

ಯುವಜನರಿಗೆ ಅವಕಾಶ ಕಲ್ಪಿಸಲು ಅಪ್ರೆಂಟಿಸ್‌ಷಿಪ್‌ ಕಾಯ್ದೆಗೆ ತಿದ್ದುಪಡಿ ತರಲಾಗುವುದು. ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿ, 5 ವರ್ಷಗಳಲ್ಲಿ ₹ 50 ಸಾವಿರ ಕೋಟಿ ಹಂಚಿಕೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.