ADVERTISEMENT

ಅಮೆರಿಕದಲ್ಲಿ ನಾಲ್ಕು ಲಕ್ಷ ಉದ್ಯೋಗ ಸೃಷ್ಟಿಸಿದ ಭಾರತದ ಕಂಪನಿಗಳು

ಪಿಟಿಐ
Published 4 ಮೇ 2023, 15:56 IST
Last Updated 4 ಮೇ 2023, 15:56 IST
   

ವಾಷಿಂಗ್ಟನ್ : ಭಾರತದ 163 ಕಂಪನಿಗಳು ಅಮೆರಿಕದಲ್ಲಿ ಒಟ್ಟು 40 ಬಿಲಿಯನ್ ಡಾಲರ್‌ (ಅಂದಾಜು ₹ 3.27 ಲಕ್ಷ ಕೋಟಿ) ಹೂಡಿಕೆ ಮಾಡಿವೆ. ಇದುವರೆಗೆ ಅವು ಅಲ್ಲಿ ಸರಿಸುಮಾರು 4.25 ಲಕ್ಷ ಉದ್ಯೋಗ ಸೃಷ್ಟಿಸಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಸಿದ್ಧಪಡಿಸಿರುವ ಸಮೀಕ್ಷಾ ವರದಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಅಮೆರಿಕದಲ್ಲಿ ಭಾರತದ ಕಂಪನಿಯು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ 185 ಮಿಲಿಯನ್ ಡಾಲರ್ (₹ 1,512 ಕೋಟಿ) ವೆಚ್ಚ ಮಾಡಿವೆ. ಶೇ 85ರಷ್ಟು ಕಂಪನಿಗಳು ಮುಂದಿನ ಕೆಲವು ವರ್ಷಗಳಲ್ಲಿ ಅಮೆರಿಕದಲ್ಲಿ ಇನ್ನಷ್ಟು ಹೂಡಿಕೆ ಮಾಡಲು ಆಲೋಚಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT