ADVERTISEMENT

5ಜಿ: ಎರಡು ದಿನಗಳಲ್ಲಿ ₹ 1.49 ಲಕ್ಷ ಬಿಡ್

ಪಿಟಿಐ
Published 27 ಜುಲೈ 2022, 16:25 IST
Last Updated 27 ಜುಲೈ 2022, 16:25 IST

ನವದೆಹಲಿ: 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯ ಮೊದಲ ಎರಡು ದಿನಗಳಲ್ಲಿ (ಮಂಗಳವಾರ, ಬುಧವಾರ) ಒಟ್ಟು ₹ 1.49 ಲಕ್ಷ ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್ ಸಲ್ಲಿಕೆಯಾಗಿವೆ. ಗುರುವಾರವೂ ಹರಾಜು ಮುಂದುವರಿಯಲಿದೆ.

‘ಹರಾಜು ವೇಳೆ ಒಳ್ಳೆಯ ಸ್ಪರ್ಧೆ ಕಂಡುಬಂದಿದೆ. ಎಲ್ಲ ಬ್ಯಾಂಡ್‌ಗಳಿಗೂ ಸ್ಪರ್ಧೆ ಇದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊ ಅತ್ಯಂತ ತುರುಸಿನಿಂದ ಬಿಡ್ ಮಾಡಿರಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಿಯೊ ಕಂಪನಿಯು ಅಂದಾಜು ₹ 80,100 ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್ ಮಾಡಿರಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ವಿಶ್ಲೇಷಕರು ಹೇಳಿದ್ದಾರೆ. ಭಾರ್ತಿ ಏರ್‌ಟೆಲ್ ಕಂಪನಿಯು ₹ 45 ಸಾವಿರ ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್ ಸಲ್ಲಿಸಿರುವ ಸಾಧ್ಯತೆ ಇದೆ.

ವೊಡಾಫೋನ್ ಐಡಿಯಾ ಕಂಪನಿಯು ₹ 18,400 ಕೋಟಿ ಮೌಲ್ಯದ ತರಂಗಾಂತರಗಳಿಗೆ ಬಿಡ್ ಸಲ್ಲಿಸಿರುವ ಸಾಧ್ಯತೆ ಇದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.