ADVERTISEMENT

‘5ಜಿ’ ಮಾಂತ್ರಿಕತೆ: ಜಿಯೊ, ಎರಿಕ್ಸನ್‌ ಜಂಟಿ ಪ್ರದರ್ಶನ

ದೂರ ನಿಯಂತ್ರಿತ ಕಾರು ಚಾಲನೆ

ಪಿಟಿಐ
Published 25 ಅಕ್ಟೋಬರ್ 2018, 18:43 IST
Last Updated 25 ಅಕ್ಟೋಬರ್ 2018, 18:43 IST
ಕೀಟನಾಶಕ ಸಿಂಪಡಿಸಲು ಬಳಸುವ ಮತ್ತು ಬೆಳೆ ವಿವರ ಸಂಗ್ರಹಿಸುವ ‘5ಜಿ’ ಆಧಾರಿತ ಡ್ರೋನ್‌ ಸಮಾವೇಶದಲ್ಲಿ ಗಮನ ಸೆಳೆಯಿತು  – ಪಿಟಿಐ ಚಿತ್ರ
ಕೀಟನಾಶಕ ಸಿಂಪಡಿಸಲು ಬಳಸುವ ಮತ್ತು ಬೆಳೆ ವಿವರ ಸಂಗ್ರಹಿಸುವ ‘5ಜಿ’ ಆಧಾರಿತ ಡ್ರೋನ್‌ ಸಮಾವೇಶದಲ್ಲಿ ಗಮನ ಸೆಳೆಯಿತು  – ಪಿಟಿಐ ಚಿತ್ರ   

ನವದೆಹಲಿ: ‘5ಜಿ’ ತಂತ್ರಜ್ಞಾನದ ನೆರವಿನಿಂದ ದೆಹಲಿಯಿಂದಲೇ ಮುಂಬೈನಲ್ಲಿನ ಕಾರ್‌ ಚಾಲನೆಯ ನಿರ್ವಹಣಾ ಕೌಶಲ್ಯ ಮತ್ತು ಮುಖ
ಚಹರೆ ಗುರುತಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್‌ ಅನ್ನು ಇಲ್ಲಿ ನಡೆಯುತ್ತಿರುವ ಮೊಬೈಲ್‌ ಸಮಾವೇಶದಲ್ಲಿ (ಐಎಂಸಿ) ಪ್ರದರ್ಶಿಸಲಾಗಿದೆ.

ಮುಕೇಶ್‌ ಅಂಬಾನಿ ಒಡೆತನದ ಮೊಬೈಲ್‌ ಸೇವಾ ಸಂಸ್ಥೆ ರಿಲಯನ್ಸ್‌ ಜಿಯೊ, ಎರಿಕ್ಸನ್‌ ಸಂಸ್ಥೆ ಜತೆ ಸೇರಿ ‘5ಜಿ’ ಮೊಬೈಲ್‌ ತಂತ್ರಜ್ಞಾನ ನೆರವಿನಿಂದ ಮುಂಬೈನಲ್ಲಿ ಇರುವ ಕಾರನ್ನು ದೆಹಲಿಯಿಂದಲೇ ಚಾಲನೆ ಮಾಡುವುದನ್ನು ಪ್ರದರ್ಶಿಸಿತು. ಸುರಕ್ಷತೆಯ ಕಟ್ಟೆಚ್ಚರ ವಹಿಸಲು ಮತ್ತು ಯಾವುದೇ ಬಗೆಯ ಬೆದರಿಕೆಯನ್ನು ಪತ್ತೆಹಚ್ಚುವ ‘5ಜಿ’ ಜೋಡಿಸಿದ ಡ್ರೋನ್‌ಗಳನ್ನು ಬಳಸುವುದರ ಪ್ರಾತ್ಯಕ್ಷಿತೆಯನ್ನು ಗುರುವಾರ ಇಲ್ಲಿ ನೀಡಲಾಯಿತು.

ಸದ್ಯಕ್ಕೆ ಬಳಕೆಯಲ್ಲಿ ಇರುವ ‘4ಜಿ’ ತಂತ್ರಜ್ಞಾನಕ್ಕಿಂತ 10ಪಟ್ಟು ಹೆಚ್ಚು ದಕ್ಷತೆ ಹೊಂದಿರುವ ‘5ಜಿ’ ನೆರವಿನಿಂದ ಸ್ವಯಂಚಾಲಿತ ವಾಹನಗಳನ್ನು ದೂರನಿಯಂತ್ರಣದಿಂದಲೇ ಸುರಕ್ಷಿತವಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಸ್ವಯಂಚಾಲಿತ ಕಾರ್‌ಗಳ ಸುರಕ್ಷತೆಯು ಇದರಿಂದ ಗಮನಾರ್ಹವಾಗಿ ಸುಧಾರಣೆಯಾಗಲಿದೆ.

ADVERTISEMENT

‘4ಜಿ’ಯನ್ನು ಮೇಲ್ದರ್ಜೆಗೆ ಏರಿಸಿದ ತಂತ್ರಜ್ಞಾನ ಎಂದೇ ‘5ಜಿ’ ಪರಿಗಣಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಅದಕ್ಕಿಂತ ಹೆಚ್ಚಿನದನ್ನು ‘5ಜಿ’ನಿಂದ ನಿರೀಕ್ಷಿಸಬಹುದಾಗಿದೆ. ಮೊಬೈಲ್‌ ಸಂಪರ್ಕ ಜಾಲ ಕ್ಷೇತ್ರದಲ್ಲಿ ಇದು ಹೊಸ ಕ್ರಾಂತಿಯನ್ನೇ ತರಲಿದೆ. ಸಂವಹನಕ್ಕೆ ಇದು ವಿಶಿಷ್ಟ ಮಾಧ್ಯಮವಾಗಿ ಕೆಲಸ ಮಾಡಲಿದೆ ಎಂದು ಜಿಯೊದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.