
ನವದೆಹಲಿ: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು, ಸುದ್ದಿಸಂಸ್ಥೆಯಾದ ಐಎಎನ್‌ಎಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನಲ್ಲಿನ ಉಳಿದಿರುವ ಷೇರುಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ.
ಮಾಧ್ಯಮಗಳ ಉಸ್ತುವಾರಿ ಹೊತ್ತಿರುವ ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸಸ್‌ನ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (ಎಎಂಎನ್‌ಎಲ್), ಐಎಎನ್‌ಎಸ್‌ನಲ್ಲಿನ ಶೇ 50ರಷ್ಟು ಷೇರುಗಳನ್ನು 2023ರ ಡಿಸೆಂಬರ್‌ನಲ್ಲಿ ಖರೀದಿಸಿತ್ತು. 2024ರ ಜನವರಿಯಲ್ಲಿ ಷೇರಿನ ಪ್ರಮಾಣವನ್ನು ಶೇ 76ಕ್ಕೆ ಹೆಚ್ಚಿಸಿಕೊಂಡಿತ್ತು. ಇದೀಗ ಉಳಿದ ಷೇರುಗಳನ್ನು ಸಹ ಖರೀದಿಸಲಿದೆ.
ಆದರೆ, ಈ ಖರೀದಿಗೆ ಆಗುವ ಹಣಕಾಸಿನ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಐಎಎನ್‌ಎಸ್‌ನಲ್ಲಿನ ಬಾಕಿ ಷೇರುಗಳನ್ನು ಖರೀದಿಸಲು ಎಎಂಎನ್‌ಎಲ್ 2026ರ ಜನವರಿ 21ರಂದು ಷೇರು ಖರೀದಿ ಒಪ್ಪಂದವನ್ನು ಮಾಡಿಕೊಂಡಿದೆ. ಪ್ರಸ್ತಾವಿತ ವಹಿವಾಟು ಪೂರ್ಣಗೊಂಡ ನಂತರ, ಐಎಎನ್‌ಎಸ್ ತನ್ನ ಅಂಗಸಂಸ್ಥೆ ಆಗಲಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಷೇರುಪೇಟೆಗೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.