ADVERTISEMENT

ಶಾಲೆಗಳ ನಿರ್ಮಾಣಕ್ಕೆ ₹2 ಸಾವಿರ ಕೋಟಿ ದೇಣಿಗೆ: ಅದಾನಿ ಸಮೂಹ

ಪಿಟಿಐ
Published 17 ಫೆಬ್ರುವರಿ 2025, 14:43 IST
Last Updated 17 ಫೆಬ್ರುವರಿ 2025, 14:43 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ನವದೆಹಲಿ: 20 ಶಾಲೆಗಳ ನಿರ್ಮಾಣಕ್ಕೆ ₹2 ಸಾವಿರ ಕೋಟಿ ದೇಣಿಗೆ ನೀಡಲಾಗುವುದು ಎಂದು ಅದಾನಿ ಸಮೂಹವು ಸೋಮವಾರ ಘೋಷಿಸಿದೆ.

ಉದ್ಯಮಿ ಗೌತಮ್ ಅದಾನಿ ಅವರು ತಮ್ಮ ಕಿರಿಯ ಪುತ್ರನ ವಿವಾಹ ಸಮಾರಂಭದಲ್ಲಿ ₹10 ಸಾವಿರ ಕೋಟಿಯನ್ನು ಸಾಮಾಜಿಕ ಕಾರ್ಯಕ್ಕೆ ಬಳಸಲಾಗುತ್ತದೆ ಎಂದು ಹೇಳಿದ್ದರು.

ಈ ಹಿಂದೆ ಆಸ್ಪತ್ರೆಗಳ ನಿರ್ಮಾಣಕ್ಕೆ ₹6 ಸಾವಿರ ಕೋಟಿ ಮತ್ತು ಕೌಶಲ ಅಭಿವೃದ್ಧಿಗಾಗಿ ₹2 ಸಾವಿರ ಕೋಟಿ ದೇಣಿಗೆಯನ್ನು ಘೋಷಿಸಿತ್ತು.

ADVERTISEMENT

ಅದಾನಿ ಸಮೂಹದ ಅದಾನಿ ಫೌಂಡೇಶನ್, ದೇಶಾದ್ಯಂತ ಶಿಕ್ಷಣದ ಸಂಸ್ಥೆಗಳನ್ನು ಸ್ಥಾಪಿಸಲು ಜಾಗತಿಕವಾಗಿ ಮುಂಚೂಣಿಯಲ್ಲಿರುವ ಜಿಇಎಂಎಸ್ ಎಜುಕೇಶನ್‌ನೊಂದಿಗೆ ಸಹಯೋಗ ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ, ಕೆ -12 ವಿಭಾಗದಲ್ಲಿ ಕನಿಷ್ಠ 20 ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಸಮೂಹ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.