ನವದೆಹಲಿ: ಅದಾನಿ ಸಮೂಹವು ತನ್ನ ಎಡಬ್ಲ್ಯುಎಲ್ ಅಗ್ರಿ ಬ್ಯುಸಿನೆಸ್ ಲಿಮಿಟೆಡ್‌ನಲ್ಲಿನ (ಅದಾನಿ ವಿಲ್ಮರ್ ಲಿಮಿಟೆಡ್) ಶೇ 20ರಷ್ಟು ಷೇರುಗಳನ್ನು ಸಿಂಗಪುರದ ವಿಲ್ಮರ್ ಇಂಟರ್‌ನ್ಯಾಷನಲ್‌ಗೆ ಮಾರಾಟ ಮಾಡಿದೆ.
ಅದಾನಿ ವಿಲ್ಮರ್‌ನಲ್ಲಿನ ತನ್ನ ಶೇ 44ರಷ್ಟು ಷೇರುಗಳನ್ನು ಮಾರಾಟ ಮಾಡಿ, ಮೂಲಸೌಕರ್ಯ ವ್ಯವಹಾರದತ್ತ ಗಮನ ನೀಡಲಾಗುವುದು ಎಂದು ಅದಾನಿ ಸಮೂಹವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಘೋಷಿಸಿತ್ತು.
25.99 ಕೋಟಿ ಈಕ್ವಿಟಿ ಷೇರುಗಳನ್ನು ಪ್ರತಿ ಷೇರಿಗೆ ₹275ರಂತೆ ₹7,150 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಅದಾನಿ ಸಮೂಹದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಷೇರುಪೇಟೆಗೆ ತಿಳಿಸಿದೆ.
ಷೇರುಗಳನ್ನು ಮಾರಾಟ ಮಾಡುವ ಮೂಲಕ ಎಫ್‌ಎಂಸಿಜಿ ವ್ಯವಹಾರದಿಂದ ಹೊರಬರುವ ಆಲೋಚನೆಯನ್ನು ಅದಾನಿ ಸಮೂಹ ಹೊಂದಿದೆ. ಈ ಷೇರುಗಳ ಮಾರಾಟದಿಂದ ವಿಲ್ಮರ್ ಇಂಟರ್‌ನ್ಯಾಷನಲ್ ಷೇರಿನ ಪಾಲು ಶೇ 64ರಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.